ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ #Akhila Karnataka Brahmana Mahasabha ರಾಮನಗರ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ರಾಘವೇಂದ್ರ ಮಯ್ಯರವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದರು ಈ ಸಂದರ್ಭದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಎಸ್. ರಘುನಾಥ್, ನಿಕಟಪೂರ್ವ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ಚನ್ನಪಟ್ಟಣ ತಾಲೂಕು, ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿಯಾದ ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಘವೇಂದ್ರಮಯ್ಯ ರವರು ಮಾತನಾಡಿ, ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಸಂಘಟಿರಾದಗ ಮಾತ್ರ ಶೈಕ್ಷಣಿಕ, ರಾಜಕೀಯ ಮತ್ತು ಉದ್ಯೋಗದಲ್ಲಿ ಅವಕಾಶ ಸಾಧ್ಯ, ಸಂಘಟಿರಾಗದೇ ಹೋದರೆ ಬ್ರಾಹ್ಮಣ ಸಮುದಾಯದ ಅಭಿವೃದ್ದಿ ಅಸಾಧ್ಯ.

Also read: ಮಹಾದೇವಪ್ಪನಿಗೂ ಶಾಕು! ಕಾಕಾ ಪಾಟೀಲಗೂ ಶಾಕು! ರಾಜ್ಯ ಸರ್ಕಾರದ ವಿರುದ್ಧ ಸಚಿವ ಎಚ್’ಡಿಕೆ ವ್ಯಂಗ್ಯ
ಉತ್ತಮ ಜನನಾಯಕ, ವಿಪ್ರ ಬಂಧು ಎಸ್.ರಘುನಾಥ್ ರವರ ತಂಡದಲ್ಲಿ ನಾನು ಸ್ಪರ್ಧೆ ಮಾಡುತ್ತಿರುವುದು ಆನೆ ಬಲ ಬಂದಂತೆ ಆಗಿದೆ, ಉತ್ತಮ ಒಡನಾಟದಿಂದ ಮಹಾಸಭಾದ ಶ್ರೇಯೋಭಿವೃದ್ದಿ ಶ್ರಮಿಸಲು ಸಹಕಾರಿಯಾಗುತ್ತದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಮನಗರ, ಚನ್ನಪಟ್ಟಣ್ಣ, ಮಾಗಡಿ ಜಿಲ್ಲೆಯ ಸದಸ್ಯರುಗಳು ಏಪ್ರಿಲ್ 13ರಂದು ಬೆಂಗಳೂರಿನ ಚಾಮರಾಜಪೇಟೆ ರಾಯರಾಯ ಕಲ್ಯಾಣ ಮಂಟಪದಲ್ಲಿ ಮತ ಕೇಂದ್ರವಿರುತ್ತದೆ ಅಲ್ಲಿ ಮತದಾನ ಮಾಡಿ ಎಂದು ವಿನಂತಿ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post