ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೊಚಾಡಿಯನ್ Kochadiyaan ಚಿತ್ರಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ Latha Rajanikanth ಅವರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಜನವರಿ 6ರ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಬೆಂಗಳೂರಿನ 1ನೆಯ ಎಸಿಎಂಎಂ ನ್ಯಾಯಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಹಾಜರಾದ ಅವರು ಜಾಮೀನು ಪಡೆದಿದ್ದಾರೆ.
ಪುತ್ರಿ ಸೌಂದರ್ಯ Soundarya ನಿರ್ದೇಶನದ ಕೊಚಾಡಿಯನ್ ಚಿತ್ರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಲತಾ ಅವರು ಮೇಲೆ ಐಪಿಸಿ 463 ಅಡಿ ಕೇಸ್ ದಾಖಲಾಗಿತ್ತು.
Also read: ಬಿಎಂಟಿಸಿಗೆ 100 ವಿದ್ಯುತ್ ಚಾಲಿತ ಬಸ್ ಸೇರ್ಪಡೆ | ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಕೊಚಾಡಿಯನ್ ಬಿಡುಗಡೆಗೆ ಸಂಬಂಧಿಸಿದಂತೆ ಎರಡು ಕಂಪೆನಿಗಳ ಜೊತೆ ಒಪ್ಪಂದವಾಗಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಶ್ಯೂರಿಟಿ ನೀಡಿದ್ದರು. ಸಿನಿಮಾ ಲಾಸ್ ಆದ ಹಿನ್ನೆಲೆಯಲ್ಲಿ ನಷ್ಟ ತುಂಬಿ ಕೊಡುವಲ್ಲಿ ಲತಾ ವಿಫಲರಾಗಿದ್ದಾರೆ ಎಂದು ದೂರು ದಾಖಲಾಗಿತ್ತು.
ಲತಾ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದ್ದರಿಂದ ನ್ಯಾಯಾಲಯಕ್ಕೆ ಹಾಜರಾಗುವುದು ಕಡ್ಡಾಯವಾಗಿತ್ತು. ಲತಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಷರತ್ತುಬದ್ದ ಜಾಮೀನನ್ನು ಮಂಜೂರು ಮಾಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















