ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಿರಂತರವಾಗಿ ಶೂಟಿಂಗ್’ನಲ್ಲಿ ಬ್ಯುಸಿ ಇದ್ದ ರಾಕಿಂಗ್ ಸ್ಟಾರ್ ಯಶ್ #Rocking Star Yash ಈಗ ರಿಲ್ಯಾಕ್ಸ್ ಮೂಡ್’ನಲ್ಲಿದ್ದು, ತಮ್ಮ ಮುದ್ದಿನ ಪತ್ನಿಯನ್ನು ಎತ್ತಿಕೊಂಡು ಮುದ್ದಾಡ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತಮ್ಮ ಪತ್ನಿ ರಾಧಿಕಾ ಪಂಡಿತ್ #Radhika Pandit ಅವರನ್ನು ಎತ್ತಿಕೊಂಡಿರುವ ಫೋಟೋವನ್ನು ಸ್ವತಃ ರಾಧಿಕಾ ಅವರೇ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹಲವು ದಿನಗಳಿಂದ ರಾಧಿಕಾ ಪಂಡಿತ್ ಅಮೆರಿಕಾದಲ್ಲಿದ್ದರು. ನಿನ್ನೆಯಷ್ಟೇ ಯಶ್ ಮುಂಬೈನಿಂದ ತೆರಳಿ ಪತ್ನಿಯನ್ನ ಭೇಟಿಯಾಗಿದ್ದಾರೆ. ಪತ್ನಿ ಮಕ್ಕಳೊಂದಿಗೆ ಸಮಯ ಕಳೆಯಲು ಅಮೆರಿಕಾಗೆ ಯಶ್ ತೆರಳಿದ್ದಾರೆ.
ಯಶ್ ಆಗಮಿಸಿದ ಖುಷಿಯಲ್ಲಿ ರಾಧಿಕಾ ಯಶ್ ಸೊಂಟದ ಮೇಲೆ ಹತ್ತಿ ಕುಳಿತಿದ್ದಾರೆ. ಫೋಟೋ ಅತ್ಯಂತ ರೊಮ್ಯಾಂಟಿಕ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರದ ಶೂಟಿಂಗ್ ಮುಗಿಸಿ ಮಂಗಳವಾರ ಯಶ್ ರಾಧಿಕಾರನ್ನು ಸೇರಿಕೊಂಡಿದ್ದಾರೆ. ಹಲವು ದಿನಗಳ ಕಾಲ ಯಶ್ ಫ್ಯಾಮಿಲಿ ಅಮೆರಿಕಾ ಪ್ರವಾಸದಲ್ಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post