ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಎಸ್’ಎಸ್’ಎಲ್’ಸಿ ಫಲಿತಾಂಶ SSLC Result ಇಂದು ಪ್ರಕಟಗೊಂಡಿದ್ದು, ಕಳೆದ 10 ವರ್ಷದಲ್ಲೇ ಈ ಬಾರಿ ದಾಖಲೆಯನ್ನು ಬರೆದಿದೆ.
ಹೌದು, ರಾಜ್ಯದಲ್ಲಿ ಈ ಬಾರಿ ಒಟ್ಟು ಶೇ. 85.63ರಷ್ಟು ಫಲಿತಾಂಶ ದಾಖಲಾಗಿದೆ. ಇದು ಕಳೆದ 10 ವರ್ಷದಲ್ಲೇ ದಾಖಲೆಯ ಫಲಿತಾಂಶ ಇದಾಗಿದೆ.
ಇನ್ನು, 2021ರಲ್ಲಿ ಎಸ್’ಎಸ್’ಎಲ್’ಸಿ ಪರೀಕ್ಷೆ ರಾಜ್ಯದ ಇತಿಹಾಸದಲ್ಲಿಯೇ ವಿನೂತನವಾಗಿ ನಡೆದಿತ್ತು. ಕೋವಿಡ್ ಸವಾಲಿನ ಸಮಯದಲ್ಲಿ ಸರಳ ಮಾದರಿಯ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದ ಎಲ್ಲರನ್ನೂ ಪಾಸ್ ಮಾಡುವುದಾಗಿ ಮೊದಲೇ ಸರಕಾರ ತೀರ್ಮಾನ ಕೂಡ ಮಾಡಿತ್ತು. ಅದರಂತೆ, ಒಬ್ಬ ವಿದ್ಯಾರ್ಥಿ ಹೊರತು ಪಡಿಸಿ ಎಲ್ಲರನ್ನು ಪಾಸ್ ಮಾಡಲಾಗಿತ್ತು. ಶೇ. 99.9 ಫಲಿತಾಂಶ ಕೂಡ ಬಂದಿತ್ತು. ತಾನು ಪರೀಕ್ಷೆ ಬರೆಯುವ ಬದಲು ಬೇರೆಯುವರು ಪರೀಕ್ಷೆ ಬರೆದ ಕಾರಣ ಒಬ್ಬ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡಲಾಗಿತ್ತು.
ಗ್ರೇಡ್ ವ್ಯವಸ್ಥೆ:
ಇನ್ನು, ಪ್ರತಿ ಬಾರಿ ರ್ಯಾಂಕ್ ಮೂಲಕ ಫಲಿತಾಂಶ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳಲ್ಲಿ ವೈಯಕ್ತಿಕವಾಗಿ ಹಾಗೂ ಜಿಲ್ಲಾವಾರು ರ್ಯಾಂಕ್ ಮಾದರಿಯಲ್ಲಿ ಅಂದರೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಫಲಿತಾಂಶ ಜಿಲ್ಲೆಗಳು ಎಂದು ಪ್ರಕಟಿಸಲಾಗುತ್ತಿತ್ತು. ಆದರೆ, ಈ ಬಾರಿ ಗ್ರೇಡ್ ಮೂಲಕ ಫಲಿತಾಂಶ ಪ್ರಕಟಿಸಲಾಗಿದ್ದು, ಈ ಮೂಲಕ ಜಿಲ್ಲೆಗಳ ನಡುವೆ ರ್ಯಾಂಕ್ ಸ್ಪರ್ಧೆಗೆ ಬ್ರೇಕ್ ಬಿದ್ದಂತಾಗಿದೆ.
ಈ ಬಾರಿ ಎ ಗ್ರೇಡ್’ನಲ್ಲಿ 32 ಹಾಗೂ ಬಿ ಗ್ರೇಡ್’ನಲ್ಲಿ 2 ಜಿಲ್ಲೆಗಳು ಫಲಿತಾಂಶ ಪಡೆದಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post