ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿನ ಉದ್ಯಮಿಯೊಬ್ಬರ ಮನೆಯನ್ನು ದರೋಡೆ ಮಾಡಿದ್ದ ನಕಲಿ ಪೊಲೀಸರ ತಂಡವನ್ನು ಪೀಣ್ಯ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಎಚ್’ಎಂಟಿ ಲೇಔಟ್’ನಲ್ಲಿರುವ ಉದ್ಯಮಿಯೊಬ್ಬರ ನಿವಾಸವನ್ನು ದುಷ್ಕರ್ಮಿಗಳು ಡಿ.4ರಂದು ದರೋಡೆ ಮಾಡಿದ್ದರು. ಉದ್ಯಮಿಯ ಪುತ್ರನ ಮೇಲೆ ದಾಳಿ ನಡೆಸಿ 60 ಲಕ್ಷ ರೂ. ಹಣ, 700 ಗ್ರಾಂ ಚಿನ್ನಾಭರಣ ಸೇರಿ ಸುಮಾರು 1 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಉದ್ಯಮಿಯ ಪತ್ನಿ ಸುಜಾತಾ ಅವರು ಪೊಲೀಸ್ ಸಮವಸ್ತçದಲ್ಲಿದ್ದ ಆರೋಪಿಗಳನ್ನು ತಮ್ಮ ಪತಿ ಮತ್ತು ಅತ್ತೆಯ ನಡುವಿನ ಕಾನೂನು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮನೆಗೆ ಬಂದಿದ್ದಾರೆ ಎಂದು ಭಾವಿಸಿ ಮನೆಯೊಳಗೆ ಸೇರಿಸಿಕೊಂಡಿದ್ದರು. ಆದರೆ, ಆರೋಪಿಗಳು ಉದ್ಯಮಿಯ ಪುತ್ರನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದರು.
Also read: ಆನವಟ್ಟಿ ಮೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ
ಆರೋಪಿಗಳು ದರೋಡೆ ನಡೆಸಿ ಮನೆಯಿಂದ ಓಡಿಹೋಗುವಾಗ ತಮ್ಮ ಗುರುತನ್ನು ಮರೆಮಾಚಲು ಡಿಜಿಟಲ್ ವಿಡಿಯೋ ರೆಕಾರ್ಡರ್ ಅನ್ನು ಸಹ ಹೊತ್ತೊಯ್ದಿದ್ದರು.
ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೀಣ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕಳುವಾದ ವಸ್ತುಗಳನ್ನು ಪತ್ತೆ ಮಾಡುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post