ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಸಾಗರ |
ಶಾಲಾ ಚಟುವಟಿಕೆಗಳಿಗೆ ಯೋಗ್ಯವಲ್ಲದ ಕೃಷಿ ಜಮೀನನನ್ನು 6-7 ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಗೇಣಿದಾರರಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್. ಹಾಲಪ್ಪ MLA Halappa ಮನವಿ ಮಾಡಿದ್ದಾರೆ.
Also read: ಮಳಖೇಡದಲ್ಲಿ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವ: 3 ದಿನ ದ್ವೈತ ಮತದ ವೈಭವ
ಈ ಕುರಿತಂತೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದ ಅನೇಕ ಶಾಲೆಗಳಿಗೆ ದಾನವಾಗಿ ಬಂದ ಶಾಲಾ ಭೂದಾನ ಜಮೀನುಗಳು ರಾಜ ಪ್ರಮುಖರ ಹೆಸರಿನಲ್ಲಿವೆ. ಈ ಜಮೀನನ್ನು ರೈತರು ೬೦-೭೦ ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಎಸ್’ಡಿಎಂಸಿಯವರು ವಿಶೇಷ ಆಸಕ್ತಿ ವಹಿಸಿ ಬೇರೆಯವರಿಗೆ ಬದಲಾಯಿಸುತ್ತಿದ್ದಾರೆ. ಇದನ್ನು ತಡೆಯಲು, ಭೂ ಸುಧಾರಣೆ ಕಾಯ್ದೆಯಲ್ಲಿ ತಿದ್ದುಪಡಿ ತಂದು, ಶಾಲಾ ಚಟುವಟಿಕೆಗೆ ಯೋಗ್ಯವಲ್ಲದ ಕೃಷಿ ಜಮೀನನ್ನು ೬-೭ ದಶಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಗೇಣಿದಾರರಿಗೆ ನೀಡಲು ಕ್ರಮ ಕೈಗೊಳ್ಳುವಂತೆ ಚರ್ಚಿಸಿದರು.
ಸದನದಲ್ಲಿ ಉತ್ತರಿಸಿದ ಕಾನೂನು ಸಚಿವರು, ಕಂದಾಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post