ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಿನ್ನೆ ಬಿಡುಗಡೆಗೊಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ Power Star Puneeth Rajkumar ಅವರ ಕೊನೆಯ ಚಿತ್ರ ಜೇಮ್ಸ್ ಮೊದಲ ದಿನವೇ 30 ಕೋಟಿ ರೂ. ದಾಖಲೆಯ ಕಲೆಕ್ಷನ್ ಗಳಿಸಿದ್ದು, ಬಾಕ್ಸ್ ಆಫೀಸ್’ನಲ್ಲಿ ಧೂಳೆಬ್ಬಿಸಿದೆ.
ಹೌದು… ಜೇಮ್ಸ್ James ಚಿತ್ರ ಮೊದಲ ದಿನ 30 ಕೋಟಿ ರೂ. ಬಾಚಿಕೊಂಡಿದ್ದು, 386 ಸಿಂಗಲ್ ಸ್ಕ್ರೀನ್, 180 ಮಲ್ಟಿಪ್ಲೆಕ್ಸ್ ಸೇರಿದಂತೆ ವಿಶ್ವದಾದ್ಯಂತ ಸಾವಿರಾರು ಬೆಳ್ಳಿ ತೆರೆಯಲ್ಲಿ ಚಿತ್ರ ಐತಿಹಾಸಿಕ ದಾಖಲೆ ಸೃಷ್ಠಿಸುವತ್ತ ಮುನ್ನುಗ್ಗುತ್ತಿದೆ.

Also read: ಕೇಂದ್ರ ಸ್ವಚ್ಛ ಸರ್ವೇಕ್ಷಣೆ ಅಭಿಯಾನದ ಹುಬ್ಬಳ್ಳಿ-ಧಾರವಾಡ ರಾಯಭಾರಿಯಾಗಿ ನಟ ಅನಿರುದ್ಧ ನೇಮಕ
ಇನ್ನು, ಅತ್ಯಂತ ಪ್ರಮುಖವಾಗಿ, 12.50 ಕೋಟಿ ರೂ.ಗೆ ಟಿವಿ ರೈಟ್ಸ್, ಗೆ 7.30 ಕೋಟಿ ರೂ.ಗೆ ಒಟಿಟಿ ರೈಟ್ಸ್ ಮಾರಾಟಗೊಂಡಿದ್ದು, ಇಡಿಯ ಭಾರತೀಯ ಚಿತ್ರರಂಗವೇ ಆಶ್ಚರ್ಯದಿಂದ ನೋಡಿದೆ. ಎಲ್ಲಕ್ಕೂ ಮಿಗಿಲಾಗಿ ಒಂದು ವಾರದ ಒಳಗಾಗಿ ಚಿತ್ರ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಬಾಚಿಕೊಳ್ಳುವ ನಿರೀಕ್ಷೆಯಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















