ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜರಾಜೇಶ್ವರಿನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಶತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರಈ ರೀತಿ ಇವೆ
ಶ್ರೀನಿವಾಸ ಕಲ್ಯಾಣದ ಬಗ್ಗೆ ಪ್ರವಚನ ನೀಡುವ ವಿದ್ವಾಂಸರು (ಕ್ರಮವಾಗಿ) : ಶ್ರೀ ಕಲ್ಲಾಪುರ ಪವಮಾನಾಚಾರ್, ಶ್ರೀ ಕರಣಂ ವಾದಿರಾಜಾಚಾರ್, ಶ್ರೀ ಅಂಬರೀಶಾಚಾರ್, ಶ್ರೀ ಸತ್ಯಪ್ರಮೋದಾಚಾರ್ಯ ಕಟ್ಟಿ, ಶ್ರೀ ಭೀಮಸೇನಾಚಾರ್ ಆತನೂರ, ಶ್ರೀ ಆನಂದತೀರ್ಥಾಚಾರ್ ಮಹಿಶಿ, ಶ್ರೀ ಅನಿರುದ್ಧಾಚಾರ್ ಪಾಂಡುರಂಗಿ, ಶ್ರೀ ಅಖಿಲಾಚಾರ್ ಅತ್ರೆ, ಶ್ರೀ ವಿದ್ಯಾಧೀಶಾಚಾರ್ಯ ಗುತ್ತಲ್. ಈ ಪಂಡಿತೋತ್ತಮರು ಶ್ರೀ ಶ್ರೀನಿವಾಸ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ವಿಚಾರಗಳ ಬಗ್ಗೆ ಉಪನ್ಯಾಸ ನೀಡುವರು. (ಸಮಯ : ಪ್ರತಿದಿನ ಸಂಜೆ 6-00 ರಿಂದ 7-00)
ಶ್ರೀಗಳವರಿಂದ “ಅಮೃತೋಪದೇಶ” : ಪ್ರತಿದಿನ ಸಂಜೆ 7-00 ರಿಂದ 8-00.
ಶೋಭಾಯಾತ್ರೆ : ಸೆಪ್ಟೆಂಬರ್ 28 ರಂದು ಸಂಜೆ 4-00ಕ್ಕೆ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ “ಶೋಭಾಯಾತ್ರೆ” ಹಮ್ಮಿಕೊಂಡಿದೆ.
ಪೂಜಾ ಕೈಂಕರ್ಯಗಳು : ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2ರ ವರೆಗೆ ಪ್ರತಿದಿನ ಬೆಳಗ್ಗೆ : ಪಾದಪೂಜೆ, ತಪ್ತಮುದ್ರಾಧಾರಣೆ, ಸಂಸ್ಥಾನ ಪೂಜೆ ನಡೆಯಲಿದೆ ಎಂದು ಶ್ರೀಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post