ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಒಂದು 3 ತಿಂಗಳಿನ ಮಗುವಿನಲ್ಲಿ ಚೀನಾದ ಎಚ್’ಎಂಪಿವಿ ವೈರಸ್ #China HMPV Virus ಪತ್ತೆಯಾದ ಬೆನ್ನಲ್ಲೇ, ಉದ್ಯಾನ ನಗರಿಯಲ್ಲಿ ಇನ್ನೊಂದು 8 ತಿಂಗಳಿನ ಮಗುವಿನಲ್ಲೂ ಸಹ ವೈರಸ್ ದೃಢಪಟ್ಟಿದೆ.
ದೇಶದಲ್ಲೇ ಮೊದಲು ಬೆಂಗಳೂರಿನಲ್ಲಿ ಪತ್ತೆಯಾದ ಮೊದಲ ಎರಡು ಪ್ರಕರಣಗಳಾಗಿದ್ದು, ಇದರ ಬೆನ್ನಲ್ಲೇ ಆತಂಕ ಶುರುವಾಗಿದೆ.
ಆಶ್ಚರ್ಯ ಎಂದರೆ ಸೋಂಕು ಹೊಂದಿರುವ ಎರಡೂ ಶಿಶುಗಳ ಕುಟುಂಬಸ್ಥರು ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ವಿದೇಶಗಳಿಂದ ಆಗಮಿಸಿದವರ ಸಂಪರ್ಕದಲ್ಲೂ ಸಹ ಇಲ್ಲ ಎಂದು ವರದಿಯಾಗಿದೆ.
ಈ ವೈರಸ್’ಗೆ ಸಂಬಂಧಿಸಿದಂತೆ ದೇಶದಾದ್ಯಂತ ಉಸಿರಾಟದ ಕಾಯಿಲೆಗಳನ್ನು ಮೇಲ್ವಿಚಾರಣೆ ಮಾಡಲು ಐಸಿಎಂಆರ್ #ICMR ಪ್ರಯತ್ನಗಳನ್ನು ನಡೆಸುತ್ತಿದ್ದು, ಜಾಗೃತೆ ವಹಿಸುವಂತೆ ಸೂಚನೆ ನೀಡಿದೆ.
ಇದೇ ವೇಳೆ ಸೋಂಕು ಪತ್ತೆಯಾಗಿದ್ದರೂ ಸಹ ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅವಶ್ಯತೆಯಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
Also read: ಸೊರಬ | ಬೈಕ್‌ನಲ್ಲಿ ಬಂದು ಮಾಂಗಲ್ಯ ಸರ ಕಳ್ಳತನ
ಚೀನಾದಲ್ಲಿ ಪತ್ತೆಯಾಗಿರುವ ಮ್ಯುಟೇಟೆಡ್ ವೈರಸ್’ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಚಿಂತೆಪಡಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ #Central Health Department ತಿಳಿಸಿದೆ.
ಮಗುವಿಗೆ ಜ್ವರ #Fever ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆ ಮಾಡಿಸಿದಾಗ ಎಚ್’ಎಂವಿಪಿ ವೈರಸ್ ಇರುವುದು ದೃಢಪಟ್ಟಿದೆ.
ಈ ಎರಡು ಪ್ರಕರಣದ ಹೊರತಾಗಿ ರಾಜ್ಯದ ಬೇರೆಲ್ಲೂ ಸಹ ವೈರಸ್ ಪತ್ತೆಯಾಗಿಲ್ಲ. ಆದರೂ, ಆರೋಗ್ಯ ಇಲಾಖೆ ಈಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.
ಇದೇ ವೇಳೆ ಚೀನಾದಲ್ಲಿ ಕಂಡು ಬಂದಿರುವ ಎಚ್’ಎಂಪಿವಿ ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧಿಕಾರಿ ಡಾ. ಅತುಲ್ ಗೋಯೆಲ್ ಕಳೆದ ವಾರ ತಿಳಿಸಿದ್ದರು.
ಈ ವೈರಸ್’ಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ಆದ್ದರಿಂದ ಅದರ ಹರಡುವಿಕೆಯನ್ನು ನಿಯಂತ್ರಿಸಲು ಸೂಕ್ತ ಮುಂಜಾಗ್ರತೆ ಮುಖ್ಯವಾಗಿದೆ. ಚೀನಾದಲ್ಲಿ ಎಚ್’ಎಂಪಿವಿ ಏಕಾಏಕಿ ಹರಡಿರುವ ಬಗ್ಗೆ ಸುದ್ದಿಗಳಿವೆ. ಇದು ಯಾವುದೇ ಇತರ ಉಸಿರಾಟದ ವೈರಸ್’ನಂತೆ ಸಾಮಾನ್ಯ ಶೀತವನ್ನು ಉಂಟುಮಾಡುತ್ತದೆ. ವಯಸ್ಸಾದವರಲ್ಲಿ ಮತ್ತು ಚಿಕ್ಕವರಲ್ಲಿ ಇದು ಜ್ವರಕ್ಕೆ ಕಾರಣವಾಗಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post