ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
2021-22ನೆಯ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ SSLC Result ಇಂದು ಘೋಷಣೆಯಾಗಿದ್ದು, ಎಂದಿನಂತೆ ಈ ಬಾರಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಒಟ್ಟಾರೆಯಾಗಿ 85.63 ಶೇಕಡಾ ಫಲಿತಾಂಶ ದಾಖಲಾಗಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಫಲಿತಾಂಶ ಪ್ರಕಟಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ರಾಜ್ಯದಲ್ಲಿ ಒಟ್ಟು 7,30,881 ವಿದ್ಯಾರ್ಥಿಗಳು ಪಾಸ್ ಆಗಿದ್ದು, 8,53,463 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು:
ಬಾಲಕಿಯರದೇ ಮೇಲುಗೈ ಫಲಿತಾಂಶ
ಈ ಬಾರಿ ರ್ಯಾಂಕ್ ಬದಲಾಗಿ ಗ್ರೇಡ್ ಫಲಿತಾಂಶ
145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಕೆ
306 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಕೆ
40,061 ಮಕ್ಕಳು ಗ್ರೇಸ್ ಮಾರ್ಕ್ಸ್ ಪಡೆದು ಪಾಸ್
3,72,279 ಬಾಲಕಿಯರು ಪಾಸ್
3,58,602 ಬಾಲಕರು ಪಾಸ್
ಎಸ್’ಎಂಎಸ್ ಮೂಲಕ ವಿದ್ಯಾರ್ಥಿಗಳಿಗೆ ಫಲಿತಾಂಶ ರವಾನೆ
ಸರ್ಕಾರಿ ಶಾಲೆ ಶೇ.8 ಫಲಿತಾಂಶ
ಅನುದಾನಿತ ಶಾಲೆ ಶೇ.87.84 ಫಲಿತಾಂಶ
ಅನುದಾನ ರಹಿತ ಶಾಲೆ ಶೇ.92.29 ಫಲಿತಾಂಶ
1,462 ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆದವರೆಲ್ಲಾ ಪಾಸ್
ಸರ್ಕಾರಿ 2, ಅನುದಾನಿತ 3, ಖಾಸಗಿ 15 ಶಾಲೆಗಳು ಶೂನ್ಯ ಫಲಿತಾಂಶ ದಾಖಲು
ಯಾವ ಗ್ರೇಡ್’ನಲ್ಲಿ ಎಷ್ಟು ಫಲಿತಾಂಶ‘
ಎ ಪ್ಲಸ್ ಪಾಸ್: 1,82,600
ಬಿ ಪ್ಲಸ್ ಪಾಸ್: 1,73,528
ಬಿ ಪಾಸ್ 1,43,900
ಸಿ ಪ್ಲಸ್ 87,801
ಸಿ 14,627
ಜಿಲ್ಲಾವಾರು ಗ್ರೇಡ್ ಫಲಿತಾಂಶ
ಎ ಗ್ರೇಡ್’ನಲ್ಲಿ 32 ಜಿಲ್ಲೆಗಳು
ಬಿ ಗ್ರೇಡ್’ನಲ್ಲಿ 2 ಜಿಲ್ಲೆಗಳು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post