ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ವ್ಯಾಪಕವಾಗಿ ಹರಡುತ್ತಿರುವ ಕೊರೋನ ಸೋಂಕು ನಿಯಂತ್ರಣಕ್ಕೆ ರಾಜ್ಯದಾದ್ಯಂತ ಈಗಾಗಲೇ ಜಾರಿಯಲ್ಲಿರುವ ಕಠಿಣ ಲಾಕ್‌ಡೌನ್ ಅನ್ನು ಜೂನ್ 7ರವರೆಗೂ ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ಮಹತ್ವದ ಘೋಷಣೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈಗಾಗಲೇ ಜಾರಿಯಲ್ಲಿರುವ ಲಾಕ್‌ಡೌನ್ ಜೂನ್ 7ರವರೆಗೂ ಮುಂದುವರೆಯಲಿದ್ದು, ಈಗಿರುವ ನಿಯಮಾವಳಿಗಳೇ ಮುಂದುವರೆಯಲಿವೆ. ಸೋಂಕು ತಡೆಗಟ್ಟಲು ಜನರ ಓಡಾಟ, ಗುಂಪು ಸೇರುವಿಕೆ ತಡೆಯಲು ಪೊಲೀಸರಿಗೆ ಮುಖ್ಯಮಂತ್ರಿಗಳು ಸ್ವತಂತ್ರ ನೀಡಿದ್ದಾರೆ.
ಈಗಾಗಲೇ ಜಾರಿಯಲ್ಲಿರುವಂತೆ ಪ್ರತಿದಿನ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಉಳಿದಂತೆ ತುರ್ತು ಸೇವೆ ಹೊರತುಪಡಿಸಿ ಬೇರಾವುದೇ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post