ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೀಲಸಂದ್ರದ ಆಂಜನೇಯ ದೇಗುಲದ ಮೈಕ್‍ನಲ್ಲಿ ಓಂಕಾರ ನಾದ ಹನುಮಾನ್ ಚಾಲೀಸ್ ಹಾಕಲು ಸಜ್ಜುಗೊಂಡಿದ್ದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ Shrirama Sene ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಜಾನ್ ವಿರೋಧಿಸಿ ಸುಪ್ರಭಾತ ಅಭಿಯಾನ ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ತಡೆಯುವ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಹಿಂದೂ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.

ದರ್ಶನ ಮಾಡುತ್ತೇವೆ ಬಿಡಿ ಎಂದು ಹಿಂದೂ ಕಾರ್ಯಕರ್ತರು ಮನವಿ ಮಾಡಿದರೂ ಅನುಮತಿ ನೀಡದ ಕಾರಣ ಹಿಂದೂ ಕಾರ್ಯಕರ್ತರು ಧಾರ್ಮಿಕ ಹಕ್ಕು ಇದೆ ಎಂದು ವಾದಿಸಿದ್ದಾರೆ. ಆದರೂ ಅಂಬೇಡ್ಕರ್ ಸರ್ಕಲ್ ನೀಲಸಂದ್ರ ದೇಗುಲದಿಂದ ಅರ್ಧ ಕಿಮೀ ದೂರದಲ್ಲೇ ಪೊಲೀಸರು ಹಿಂದೂ ಕಾರ್ಯಕರ್ತರನ್ನು ತಡೆದಿತಡೆದಿರುವ ಘಟನೆ ನಡೆದಿದೆ.
Also read: ಶಿಕಾರಿಪುರ: ಶ್ರೀ ಚೌಕಿ ಬಸವೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಂಸದ ರಾಘವೇಂದ್ರ ಚಾಲನೆ

ಮಸೀದಿಗಳ ಆಜಾನ್ ತಡೆಯಿರಿ. ನಮ್ಮನ್ನು ತಡೆಯಬೇಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿ, ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















