ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ #Tejaswi Surya ಎರಡನೇ ಭಾರಿ ದಾಖಲೆ ಅಂತರದಲ್ಲಿ ವಿಜಯಮಾಲೆ ಧರಿಸಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಫಲಿತಾಂಶ ಘೋಷಣೆಯಾಗಿದ್ದು, ತೇಜಸ್ವಿ ಸೂರ್ಯ 2.10 ಲಕ್ಷ ಮತಗಳ ಅಂತರದಲ್ಲಿ ಗೆಲುವಿನೊಂದಿಗೆ ಮತ್ತೊಮ್ಮೆ ಸಂಸತ್ ಪ್ರವೇಶಿಸಿದ್ದಾರೆ.
Also read: ಉತ್ತರ ಕನ್ನಡ | ವಿಶ್ವೇಶ್ವರ ಹೆಗೆಡೆ ಕಾಗೇರಿ ಜಯಭೇರಿ | ಮುಗ್ಗರಿಸಿದ ನಿಂಬಾಳ್ಕರ್
ತೇಜಸ್ವಿ ಸೂರ್ಯ ವಿರುದ್ಧ ಕಣಕ್ಕೆ ಇಳಿದಿದ್ದ ಕಾಂಗ್ರೆಸ್’ನ ಸೌಮ್ಯ ರೆಡ್ಡಿ ಹೀನಾಯವಾಗಿ ಸೋತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಹ ಬಿಜೆಪಿ ವಿರುದ್ಧ ಸೌಮ್ಯ ರೆಡ್ಡಿ ಸೋತಿದ್ದರು. ಮತ ಎಣಿಕೆ ವಿಚಾರದಲ್ಲಿ ಭಾರೀ ತಕರಾರು ತೆಗೆದಿದ್ದ ಸೌಮ್ಯ ರೆಡ್ಡಿ ಸುಮಾರು 3-4 ಬಾರಿ ಮರು ಮತ ಎಣಿಕೆ ಮಾಡಿಸಿದ್ದರು. ಆದರೂ, ಕೊನೆಗೆ ಸೋಲೊಪ್ಪಬೇಕಾಯಿತು. ಈಗ ಒಂದು ವರ್ಷದ ಅಂತರದಲ್ಲಿ ಮತ್ತೊಮ್ಮೆ ಸೋತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post