ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾವು ಭರವಸೆ ನೀಡಿರುವಂತೆ ಐದು ಯೋಜನೆಗಳ ಜಾರಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ನುಡಿದಂತೆ ನಡೆದಿದ್ದೇವೆ ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಹೇಳಿದ್ದಾರೆ.
ಈ ಕುರಿತಂತೆ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಹತ್ವದ ಘೋಷಣೆ ಮಾಡಿರುವ ಅವರು ಐದು ಗ್ಯಾರೆಂಟಿಗಳನ್ನು ಈಡೇರಿಸುತ್ತಿದ್ದೇವೆ. ಹಣಕಾಸು ನಿರ್ವಹಣೆ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹ ಮಾಡಿ, ಯೋಜನೆ ಜಾರಿಗೆ ಆದೇಶ ಪತ್ರ ಸಿದ್ದಪಡಿಸಲು ಸೂಚನೆ ನೀಡಲಾಗಿದೆ. ಈ ಯೋಜನೆಗಳೂ ಎಂದಿನಿಂದ ಜಾರಿಯಾಗುತ್ತದೆ ಎಂಬುದನ್ನು ಮುಂದಿನ ವಾರ ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಮಾಹಿತಿಯಂತೆ ಸಂಪುಟ ಸಭೆಯಲ್ಲಿ ಕೈಗೊಂಡಿರುವುದು ಕೇವಲ ನಿರ್ಣಯವಾಗಿದ್ದು, ಹಣಕಾಸು ಹೊಂದಾಣಿಕೆ ಸೇರಿದಂತೆ ಎಲ್ಲ ಮಾಹಿತಿ ಪಡೆದು, ಆನಂತರವಷ್ಟೇ ಆದೇಶ ಹೊರಡಿಸುತ್ತೇವೆ ಎಂದರು.
ಐದು ಗ್ಯಾರೆಂಟಿಗಳ ಬಗ್ಗೆ ಹೇಳಿದ್ದಿಷ್ಟು:
ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಎಲ್ಲ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತ ಸರಬರಾಜು. ಇದರ ಮಾಸಿಕ ವೆಚ್ಚ 1200 ಕೋಟಿ ರೂ. ಆಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಎಲ್ಲ ಮನೆಯ ಒಡತಿಗೆ ಪ್ರತಿ ತಿಂಗಳು 2000 ಸಾವಿರ ರೂ. ಅವರ ಖಾತೆಗೆ ವರ್ಗಾವಣೆ
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ
Also read: ಕಾವೇರಿ-2.0 ತಂತ್ರಾಂಶ ಸದುಪಯೋಗಪಡಿಸಿಕೊಳ್ಳಿ: ಗಿರೀಶ್ ಭಿಸ್ಟನ ಗೌಡರ್ ಸಲಹೆ
ಯುವ ನಿಧಿ ಯೋಜನೆಯ ಅಡಿಯಲ್ಲಿ ಪದವೀಧರರಿಗೆ ಪದವಿ ಮುಗಿದ 2 ವರ್ಷಗಳ ಅವಧಿವರೆಗೂ ಪ್ರತಿ ತಿಂಗಳು 3000 ಸಾವಿರ ರೂ. ಸಹಾಯಧನ (ಒಂದು ವೇಳೆ 2 ವರ್ಷದ ಅವಧಿ ನಡುವೆ ಅವರಿಗೆ ಯಾವುದೇ ರೀತಿಯ ಸರ್ಕಾರಿ/ಖಾಸಗಿ ಉದ್ಯೋಗ ದೊರೆತರೆ ಸಹಾಯಧನ ನಿಲ್ಲಿಸಲಾಗುತ್ತದೆ.) ಅದೇ ರೀತಿ ಡಿಪ್ಲೊಮಾ ಪಾಸಾದವರಿಗೆ ಉದ್ಯೋಗ ದೊರೆಯುವರೆಗೂ ಪ್ರತಿ ತಿಂಗಳು 1500 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.
ಇನ್ನು, ರಾಜ್ಯದ ನಿವಾಸಿಗಳಾಗಿರುವ ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್’ನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಪಾಸ್ ನೀಡಲಾಗುತ್ತದೆ. ಹೊರ ರಾಜ್ಯದಿಂದ ಆಗಮಿಸಿದವರಿಗೆ ಇದು ಅನ್ವಯವಾಗುವುದಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post