ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ಚಾಲೆಂಜಿಗ್ ಸ್ಟಾರ್ ದರ್ಶನ್ #Challenging Star Darshan ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದು, ರಾಜ್ಯದಲ್ಲಿ ಸಂಚಲನ ಸೃಷ್ಠಿಸಿದೆ.
ಏನಿದು ಘಟನೆ?
ಕಳೆದ ಭಾನುವಾರ ಸುಮನಹಳ್ಳಿಯ ಅಪಾರ್ಟ್’ಮೆಂಟ್ ಒಂದರ ಎದುರಿನಲ್ಲಿನ ರಾಜಕಾಲುವೆ ಬಳಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ದೊರೆತಿತ್ತು. ಸನಿಹದಲ್ಲೇ ಕೆಲಸ ಮಾಡುವ ಕೇವಲ್ ರಾಮ್ ಎಂಬ ಸೆಕ್ಯುರಿಟಿ ಗಾರ್ಡ್ ಶವವನ್ನು ಮೊದಲು ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಶವದ ಮೇಲೆ ಹಲ್ಲೆ ನಡೆಸಿರುವ ಗುರುತುಗಳ ಪತ್ತೆಯಾದ ಹಿನ್ನೆಲೆಯಲ್ಲಿ ಪೋಸ್ಟ್ ಮಾರ್ಟಮ್ ನಡೆಸಿ, ಹಲ್ಲೆ ನಡೆದಿರುವುದನ್ನು ದೃಢಪಡಿಸಿಕೊಂಡಿದ್ದಾರೆ.
ಅಲ್ಲಿಂದ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯ ಮೂಲ, ಶವ ಪತ್ತೆಯಾದ ನಾಲ್ಕೈದು ದಿನಗಳ ಹಿಂದಿನ ಅವರ ಚಲನ ವಲನಗಳ ಕುರಿತಾಗಿ ಮಾಹಿತಿ ಕಲೆ ಹಾಕುತ್ತಾರೆ.
ಪ್ರಮುಖವಾಗಿ ಮೃತ ವ್ಯಕ್ತಿಯ ಮೊಬೈಲ್ ಕರೆ ಅಂದರೆ ಸಿಡಿಆರ್ ಪರಿಶೀಲನೆ ನಡೆಸಿದ ವೇಳೆ ದರ್ಶನ್ ಅವರ ಬೌನ್ಸರ್’ಗಳು ಈ ವ್ಯಕ್ತಿಯ ಜೊತೆ ಮೊಬೈಲ್ ಮೂಲಕ ಮಾತನಾಡಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.
Also read: ಕೊಲೆ ಪ್ರಕರಣ | ನಟ ದರ್ಶನ್ ಪೊಲೀಸ್ ವಶಕ್ಕೆ | ಬೆಂಗಳೂರು ಕಮಿಷನರ್ ಬಿಗ್ ಸ್ಟೇಟ್ಮೆಂಟ್
ಈ ಮಾಹಿತಿಯ ಆಧಾರದಲ್ಲಿ ದರ್ಶನ್ ಅವರ ಬೌನ್ಸರ್’ಗಳನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗಿ, ಆರಂಭದಲ್ಲಿ ಹಣಕಾಸಿನ ವಿಚಾರಕ್ಕೆ ಹಲ್ಲೆ ಮಾಡಿದ್ದಾಗಿ ಹೇಳಿದ್ದಾರೆ. ಆದರೆ, ಪೊಲೀಸ್ ವಿಚಾರಣೆ ತೀವ್ರವಾದ ನಂತರ ಪ್ರಕರಣದಲ್ಲಿ ದರ್ಶನ್ ಅವರ ಪಾತ್ರವಿರುವುದಾಗಿ ಬಾಯಿ ಬಿಟ್ಟಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಅಲ್ಲದೇ, ಮೊಬೈಲ್ ಕರೆಗಳು ಸೇರಿದಂತೆ, ವಿವಿಧ ತಾಂತ್ರಿಕ ಮಾಹಿತಿಯ ಆಧಾರದಲ್ಲಿ ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಅವರಿಗೆ ದರ್ಶನ್ ಅವರ ಬೌನ್ಸರ್ ಕರೆ ಮಾಡಿ ಕರೆಸಿಕೊಂಡಿದ್ದು, ರಾಜರಾಜೇಶ್ವರಿ ನಗರದ ಶೆಡ್’ವೊಂದರಲ್ಲಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಅಸ್ವಸ್ಥಗೊಂಡು ಆತ ಮೃತಪಟ್ಟಿದ್ದಾನೆ. ಆನಂತರ ಕಾಮಾಕ್ಷಿಪಾಳ್ಯದ ನಾಲೆ ಬಳಿಯಲ್ಲಿ ಶವವನ್ನು ಎಸೆದಿದ್ದರು ಎಂದು ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ಚಂದನ್ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಅಧಿಕಾರಿಗಳ ತಂಡ ದರ್ಶನ್ ಅವರನ್ನು ಮೈಸೂರಿನಲ್ಲಿ ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post