ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಿ ಕಾಶ್ಮೀರಿ ಫೈಲ್ಸ್ The Kashmiri Files ಚಿತ್ರದ ಕಥೆ ಸತ್ಯಕ್ಕೆ ದೂರವಾಗಿದ್ದು, ಬಿಜೆಪಿಗೆ ಅನುಕೂಲವಾಗುವಂತೆ ಕಥೆ ಹೆಣೆದು ಚಿತ್ರ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ D K Shivakumar ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚಿತ್ರದಲ್ಲಿ ತೋರಿಸಿರುವ ಕಥೆ ಸತ್ಯಘಟನೆಯಲ್ಲ. ನಮ್ಮ ದೇಶದಲ್ಲಿ ಮಹಾತ್ಮ ಗಾಂಧಿಜೀ Mahathma Gandhiji ಹಾಗೂ ಇಂದಿರಾಗಾಂಧಿಯವರ Indira Gandhi ಹತ್ಯೆಗಿಂತಲೂ ದೊಡ್ಡ ಸ್ಟೋರಿ ಬೇಕಾ. ಇವುಗಳ ಮುಂದೆ ಯಾವ ಸತ್ಯಘಟನೆಯ ಸ್ಟೋರಿಯಿದೆ. ಬಿಜೆಪಿಗೆ ಚುನಾವಣೆಯಲ್ಲಿ ಅನುಕೂಲವಾಗುವಂತೆ ಕಥೆ ಹೆಣೆದು ಕಾಶ್ಮೀರಿ ಫೈಲ್ಸ್ ಚಿತ್ರ ನಿರ್ಮಿಸಲಾಗಿದೆ ಎಂದು ದೂರಿದರು.
Also read: ತೀರ್ಥಹಳ್ಳಿ: ಮರದ ಮೇಲಿದ್ದ ಬೃಹದಾಕಾರದ ಕಾಳಿಂಗ ಸರ್ಪ ಸಂರಕ್ಷಣೆ…!
ಇನ್ನು, ಕಾಶ್ಮೀರಿ ಫೈಲ್ಸ್ ಚಿತ್ರಕ್ಕಾಗಿ ನಮ್ಮ ಕನ್ನಡದ ದಿ. ಪುನೀತ್ ರಾಜಕುಮಾರ್ Puneeth Rajkumar ಅವರ ಕೊನೆಯ ಜೇಮ್ಸ್ ಚಿತ್ರವನ್ನು ಥಿಯೇಟರ್’ನಿಂದ ಎತ್ತಂಡಗಿ ಮಾಡಿಸಲು ಯತ್ನಿಸಲಾಗುತ್ತಿದೆ. ಬಿಜೆಪಿ ಸಚಿವರು ಹಾಗೂ ಶಾಸಕರು ಇಂತಹ ಒತ್ತಡವನ್ನು ಚಿತ್ರಮಂದಿರದ ಮಾಲೀಕರುಗಳಿಗೆ ಹಾಕುತ್ತಿದ್ದಾರೆ. ಕೆಲವು ಚಿತ್ರಮಂದಿರದ ಮಾಲೀಕರು ನನಗೆ ಕರೆ ಮಾಡಿ ತಿಳಿಸಿದ್ದು, ಜೇಮ್ಸ್ ಚಿತ್ರ ತೆಗೆದು ಕಾಶ್ಮೀರಿ ಫೈಲ್ಸ್ ಹಾಕುವಂತೆ ಅಥವಾ ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ಜನರನ್ನು ಸೆಳೆಯಲು ಪುನೀತ್ ಚಿತ್ರವನ್ನು ತೆಗೆಯುವಂತೆ ಒತ್ತಡ ಹಾಕುತ್ತಿದ್ದಾರೆ. ಬಿಜೆಪಿಯುವರಿಗೆ ಕನಿಷ್ಠ ಮಾನವೀಯತೆಯಿಲ್ಲದ್ದರಿಂದ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post