ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೇಣುಕಾ ಸ್ವಾಮಿ ಕೊಲೆ ಪ್ರಕರಣದ #Renukaswamy Murder Case ಆರೋಪದಡಿ ಜೈಲಿನಲ್ಲಿರುವ ನಟ ದರ್ಶನ್ #Darshan ಜಾಮೀನಿನ ಮೇಲೆ ಹೊರಗಡೆ ಬಂದ ಸಂದರ್ಭದಲ್ಲಿ ಯಾಕೆ ಆಪರೇಷನ್ ಮಾಡಿಸಿಕೊಂಡಿರಲಿಲ್ಲ ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು ಇದೀಗ ಅವರ ಪತ್ನಿ ವಿಜಯಲಕ್ಷ್ಮಿ #Vijayalakshmi ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಹೌದು… 25 ವರ್ಷದಲ್ಲಿ ಮೊದಲ ಬಾರಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕ್ಯಾಮರಾ ಮುಂದೆ ಬಂದು ದರ್ಶನ್ ಅವರ ಸಿನಿಮಾ ರಿಲೀಸ್ ಕಾರಣಕ್ಕೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಹಲವು ವಿಚಾರಗಳನ್ನು ಬಿಚ್ಚಿಟ್ಟಿರುವ ಅವರು ದರ್ಶನ್ ಅವರ ಬೆನ್ನು ನೋವಿನ ಕುರಿತು ತಿಳಿಸಿದ್ದಾರೆ.
ಡೆವಿಲ್ #Devil ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಅವರಿಗೆ ಬೆನ್ನು ನೋವಿತ್ತು. ಆಪರೇಶನ್ ಆದರೆ ಆರು ತಿಂಗಳು ಅಥವಾ ಒಂದು ವರ್ಷ ಬೆಡ್ ರೆಸ್ಟ್ ಮಾಡಬೇಕು ಎಂದು ಸೂಚಿಸಲಾಗಿತ್ತು. ದರ್ಶನ್ ತಮ್ಮ ಸಿನಿಮಾ ಕೆಲಸದಲ್ಲಿ ಫೈಟ್, ಡ್ಯಾನ್ಸ್ ಮಾಡಬೇಕು. ಅವರು 9-5 ಜಾಬ್ ಮಾಡೋಕೆ ಆಗೋದಿಲ್ಲ. ಭಾರತದಲ್ಲಿ ಆಪರೇಶನ್ ಆದರೆ ಹೀಗೆಲ್ಲ ಮಾಡೋಕೆ ಆಗೋದಿಲ್ಲ. ಸಿಂಗಾಪುರದಲ್ಲಿ ವೈದ್ಯರನ್ನು ಕಾಂಟ್ಯಾಕ್ಟ್ ಮಾಡಿದಾಗ ಅವರು ಲೇಸರ್ ಟ್ರೀಟ್‌ಮೆಂಟ್ ಮಾಡಿಸೋಣ ಎಂದರು. ಹೀಗಾಗಿ ಸದ್ಯಕ್ಕೆ ಆಪರೇಷನ್ ಮಾಡುವುದನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















