ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಿರುಮಲ ತಿರುಪತಿ ದೇವಸ್ಥಾನದ #TTD ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಬೆಂಗಳೂರಿನ ವೈಯಾಲಿಕಾವಲ್ ನ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಗೀತಾ ಜಯಂತಿ ಅಂಗವಾಗಿ ಶ್ರೀಮದ್ಭಗವದ್ಗೀತಾ 18 ಅಧ್ಯಾಯಗಳ ಪಾರಾಯಣವನ್ನು ಮತ್ತು ಕಂಠಸ್ಥ ಸ್ಪರ್ಧೆಯ #Bhagavad Gita recitation competition ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸ್ಥಾನಿಕ ಸಲಹಾ ಮಂಡಳಿ ಅಧ್ಯಕ್ಷ ಕೆ .ವೀರಾಂಜನೇಯಲು ,ದೇವಾಲಯದ ಅಧೀಕ್ಷಕಿ ವಿ. ಜಯಂತಿ , ಉದ್ಯಮಿ ರಾಧಾಕೃಷ್ಣ ಅಡಿಗ ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾರಂಭದಲ್ಲಿ ದಾಸ ವಿಜಯ ಸಮ್ಮಿಲನ ,ವಾಸವಿ ಮಹಿಳಾ ಮಂಡಳಿ , ಆಲ್ ಇಂಡಿಯಾ ವಿಷ್ಣು ಸಹಸ್ರನಾಮ ಭಜನಾ ಮಂಡಳಿ ಇವರ ವತಿಯಿಂದ ನೂರಾರು ಭಕ್ತರು ಪಾರಾಯಣ ನಡೆಸಿಕೊಟ್ಟರು.

ತೀರ್ಪುಗಾರರಾಗಿ ಆಗಮಿಸಿದ್ದ ಡಾ. ಗುರುರಾಜ ಪೋಶೆಟ್ಟಿ ಹಳ್ಳಿ, ಜ್ಯೋತಿ ಪಡಿಯಾರ್, ಲಕ್ಷ್ಮೀನಾಗೇಶ್, ಲಕ್ಷ್ಮಿ ಸತೀಶ್, ರಾಮಕೃಷ್ಣ, ಬಿ.ವಿ. ತಾರಾದೇವಿ ಮತ್ತು ದಿನೇಶ್ ರವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಗವದ್ಗೀತಾ ಕಂಠಸ್ಥ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ಎಂದು ಟಿಟಿಡಿ ಹೆಚ್ ಡಿ ಪಿ ಪಿ ಸಂಚಾಲಕ ಡಾ. ಪಿ ಭುಜಂಗ ರಾವ್ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post