ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಿಹಾರ ಚುನಾವಣೆಯಲ್ಲಿ #Bihara Assembly Election ವೋಟ್ ಚೋರಿಯಾಗಿದೆ. ಆದರೂ ಜನರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಅಲ್ಲಿನ ಜನರು ನಮಗೆ ಯಾಕೆ ಮತ ಹಾಕಿಲ್ಲ. ಎನ್’ಡಿಎಗೆ #NDA ಯಾಕೆ ಅಷ್ಟು ದೊಡ್ಡ ಬಹುಮತ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ. ಅಲ್ಲೂ ಸಹ ವೋಟ್ ಚೋರಿ ಆಗಿದೆ. ಆದರೂ ನಾವು ತೀರ್ಪು ಒಪ್ಪಿಕೊಳ್ಳಬೇಕು ಎಂದರು.
ಯಾಕೆ ಹಿನ್ನಡೆ ಆಗಿದೆ ಗೊತ್ತಿಲ್ಲ, ನಾನು ಇನ್ನೂ ನೋಡಿಲ್ಲ, ಸರಿಯಾಗಿ ಮಾಹಿತಿ ಪಡೆದು ಮತ್ತೆ ಮಾತಾಡ್ತೀನಿ ಎಂದರು.

ಇನ್ನು ಕೆಲವೇ ಗಂಟೆಗಳಲ್ಲಿ ಬಿಹಾರ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
ಮತ ಎಣಿಕೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ಐತಿಹಾಸಿಕ ಮುನ್ನಡೆಯಲ್ಲಿ ಎನ್’ಡಿಎ ಬೀಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ವೋಟ್ ಚೋರಿ ಆಗಿದೆ ಎಂದು ಪ್ರತಿಭಟನೆಗಳನ್ನು ಆರಂಭಿಸುತ್ತಿದೆ.

ಬಿಹಾರ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳ ಎಲ್ಲಾ ವರದಿಗಳಲ್ಲಿ ಉಲ್ಲೇಖಿಸಿದ್ದಕ್ಕೂ ಮೀರಿ ಬಿಜೆಪಿ ನೇತೃತ್ವದ ಎನ್’ಡಿಎ ಮೈತ್ರಿಕೂಟ ಭರ್ಜರಿ ಗೆಲುವಿನತ್ತ ಸಾಗುತ್ತಿದೆ.
12.30ರ ವೇಳೆಗೆ 243 ಕ್ಷೇತ್ರಗಳಲ್ಲಿ 194 ಕ್ಷೇತ್ರಗಳಲ್ಲಿ ಎನ್’ಡಿಎ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ 49 ಸ್ಥಾನಗಳಲ್ಲಷ್ಟೇ ಮುನ್ನಡೆಯಲ್ಲಿದೆ.
ಬಿಹಾರದಲ್ಲಿ ಅಧಿಕಾರದ ಗದ್ದುಗೆಯೇರಲು 122 ಸ್ಥಾನಗಳ ಅಗತ್ಯವಿದೆ. ಆದರೆ, ಎನ್’ಡಿಎ ಮೈತ್ರಿಕೂಟ ಈಗಾಗಲೇ 194 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಹುತೇಕ ಐತಿಹಾಸಿಕ ಗೆಲುವಿನತ್ತ ಸಾಗುತ್ತಿದೆ.
ಇನ್ನು, ಚುನಾವಣಾ ಚಾಣಕ್ಯ ಎಂದೇ ಬಿಂಬಿತವಾಗಿದ್ದ ಪ್ರಶಾಂತ್ ಕಿಶೋರ್ ನೇತೃತ್ವದ ಜೆಎಸ್’ಪಿ ಪಕ್ಷ ಒಂದು ಕ್ಷೇತ್ರದಲ್ಲೂ ಸಹ ಇಲ್ಲದೇ ಧೂಳಿಪಟವಾಗಿದ್ದಾರೆ. ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post