No Result
View All Result
Malnad is a Cultural ‘Gharana’ of Great Minds: Dr. Jayamala at Sahyadri Utsava
English Articles

Malnad is a Cultural ‘Gharana’ of Great Minds: Dr. Jayamala at Sahyadri Utsava

by ಕಲ್ಪ ನ್ಯೂಸ್
March 13, 2026
0

Kalpa Media House  |  Shimoga | Invoking the poetic essence of the Malnad landscape, veteran actor, former minister, and Chairperson...

Read moreDetails
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
  • Advertise With Us
  • Grievances
  • About Us
  • Contact Us
Tuesday, March 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ವಾಕ್ ಫಾರ್ ದಿ ವಾಟರ್, ನೀರಿಗಾಗಿ ನಡೆಯುತ್ತೇವೆ ಹಿಂದೆ ಸರಿವ ಪ್ರಶ್ನೆಯೇ ಇಲ್ಲ: ಡಿ.ಕೆ. ಶಿವಕುಮಾರ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 5, 2022
in ಬೆಂಗಳೂರು ನಗರ
0
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್’ಗೆ ಕೊರೋನಾ ಪಾಸಿಟಿವ್!

File Image

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಇದು ಕೋವಿಡ್ ಲಾಕ್ ಡೌನ್ ಅಲ್ಲ, ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್ ಡೌನ್. ಇಲ್ಲಿ ಯಾವುದೇ ಟಫ್ ರೂಲ್ ಇಲ್ಲ. ಬಿಜೆಪಿಯವರು ರಾಜಕಾರಣ ಮಾಡಲು ಟಫ್ ಆಗಿದೆ, ಅವರ ರಾಜಕಾರಣ ಟಫ್ ಆಗಿದೆ, ಜನ ಅವರಿಗೆ ಟಫ್ ಆಗಿ ಉತ್ತರ ನೀಡುತ್ತಿದ್ದಾರೆ. ಅದಕ್ಕಾಗಿ ಈ ನಿರ್ಬಂಧ ಹೇರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಸರಕಾರ ಹೇಳುತ್ತಿದೆ. ರಾಜ್ಯದಲ್ಲಿ 6 ಕೋಟಿ ಜನ ಇದ್ದಾರೆ. ಸೋಂಕಿತರ ಸಂಖ್ಯೆ 2 ರಿಂದ 3 ಸಾವಿರಕ್ಕೆ ಏರಿದೆ ಎಂದು ಹೇಳುತ್ತಿದ್ದಾರೆ. ಆ ಸೋಂಕಿತರು ಎಲ್ಲಿದ್ದಾರೆ ಎಂದು ಪಟ್ಟಿ ಕೊಟ್ಟರೆ ನಾವು ಹೋಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಅವರು ರಾಲಿ, ಪ್ರತಿಭಟನೆ ಮಾಡಬೇಡಿ ಎಂದಿದ್ದಾರೆ. ನಮ್ಮದು ನೀರಿಗಾಗಿ ನಡಿಗೆ‌. ವಾಕ್ ಫಾರ್ ದಿ ವಾಟರ್. ನಾವು ನೀರಿಗಾಗಿ ನಡೆಯುತ್ತೇವೆ ಅಷ್ಟೇ.

ಜನರ ಹಿತಕ್ಕಾಗಿ, ಕುಡಿಯುವ ನೀರಿಗೆ, ಜನರ ಭಾವನೆ, ಧ್ವನಿಗಾಗಿ, ರೈತರ ರಕ್ಷಣೆಗಾಗಿ ಬೆಂಗಳೂರಿನ ನಾಗರಿಕರಿಗಾಗಿ ನಾವು ಮನವಿ ಮಾಡುತ್ತಿದ್ದೇವೆ. ನಮ್ಮದು ಹೋರಾಟವಲ್ಲ ಮನವಿ. ಸರ್ಕಾರ ನಿರ್ಬಂಧ ಎಂದು ನೋಟೀಸ್ ಜಾರಿ ಮಾಡಿದ್ದಾರೆ. ನಾವು ರಾಲಿ, ಧರಣಿ ಮಾಡುವುದಿಲ್ಲ. ನೀರಿಗಾಗಿ ನಡೆಯುತ್ತೇವೆ. ರಸ್ತೆಯಲ್ಲಿ ಯಾರೂ ನಡೆಯಬಾರದಾ? ಇಡೀ ರಾಜ್ಯದಲ್ಲಿ ರಸ್ತೆಯಲ್ಲಿ ಯಾರೂ ಓಡಾಡಬಾರದಾ? ಅದನ್ನು ತಡೆಯಲು ಹೇಗೆ ಸಾಧ್ಯ?

ನನಗೆ ಒಂದು ವಿಚಾರದಲ್ಲಿ ಬಹಳ ಸಂಕಟವಾಗುತ್ತಿದೆ. ಈಗಾಗಲೇ ಜನ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕರು ಒದ್ದಾಡುತ್ತಿದ್ದಾರೆ. ಅವರ ಮೇಲೆ ಅನಗತ್ಯವಾಗಿ ಮತ್ತೆ ಲಾಕ್ ಡೌನ್ ಹೇರುವುದು ಎಷ್ಟರ ಮಟ್ಟಿಗೆ ಸರಿ?

ಮೊದಲು ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಿ:
ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಚಿವ ಸುಧಾಕರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ನನ್ನ ಬ್ರದರ್ ಸುಧಾಕರ್ ಅವರು ಮೊದಲ ಅಲೆಯಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡಿದರಲ್ಲಾ ಅದಕ್ಕೆ ಸಂಬಂಧಿಸಿದಂತೆ ಮೊದಲು ಪ್ರಕರಣ ದಾಖಲಿಸಿಕೊಳ್ಳಲಿ. ಆಗಲೂ ಮಾರ್ಗಸೂಚಿ ಇತ್ತಲ್ಲವೇ? ಅವರ ಮಕ್ಕಳ ಮೇಲೆ ಹಾಕುವುದು ಬೇಡ. ಮಾರ್ಗಸೂಚಿ ಉಲ್ಲಂಘಿಸಿದ ಶ್ರೀರಾಮಲು, ಮದುವೆ, ಸಭೆ, ಸಮಾರಂಭಕ್ಕೆ ಹೋಗಿದ್ದ ಯಡಿಯೂರಪ್ಪನವರು, ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಪ್ರಕರಣ ದಾಖಲಿಸಲಿ. ಜನಾಶೀರ್ವಾದ ಯಾತ್ರೆ ಮಾಡಿದ ಕೇಂದ್ರ ಬಿಜೆಪಿ ಮಂತ್ರಿಗಳ ಮೇಲೆ ಪ್ರಕರಣ ದಾಖಲಿಸಲಿ. ಅದನ್ನು ಬಿಟ್ಟು ನನಗೆ ವಾರೆಂಟ್ ಕಳುಹಿಸಿದ್ದಾರೆ’ ಎಂದರು.

ಪಾದಯಾತ್ರೆ ಮಾಡಿಯೇ ತೀರುತ್ತೀರಾ, 9 ರಂದು ವೀಕೆಂಡ್ ಕರ್ಫ್ಯೂ ಇದೆ, ದಿನಾಂಕವೇನಾದರೂ ಬದಲಾಗುತ್ತಾ, ನಿಗದಿಯಂತೆ ಪಾದಯಾತ್ರೆ ಉದ್ಘಾಟನೆಯಾಗುತ್ತಾ ಎಂಬ ಪ್ರಶ್ನೆಗೆ, ‘ನಾವು ಪಾದಯಾತ್ರೆ ಮಾಡುತ್ತಿಲ್ಲ. ನೀರಿಗಾಗಿ ನಡೆಯುತ್ತೇವೆ, ನೀರಿಗಾಗಿ ನಡೆಯಬಾರದೇ? ನಾವು ಮನೆಯಿಂದ ಯಾರು ಹೊರಬಂದು ಓಡಾಡಬಾರದೇ? ಸರಕಾರದ ಯಾರೂ ರಸ್ತೆಯಲ್ಲಿ ಓಡಾಡುವುದಿಲ್ಲವೇ?’ ಎಂದು ಮರುಪ್ರಶ್ನಿಸಿದರು.

ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಪಾದಯಾತ್ರೆ ದಿನಾಂಕ ಬದಲಾವಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ಯಾವ ಬದಲಾವಣೆಯೂ ಇಲ್ಲ. ಯಾರು ಹೇಳಿದ್ದು ಅದು ಪಾದಯಾತ್ರೆ ಅಂತಾ. ಅದು ನೀರಿಗಾಗಿ ನಡಿಗೆ ಅಷ್ಟೇ. ಈಗಾಗಲೇ ನಮ್ಮ ಶಾಸಕಾಂಗ ಪಕ್ಷದ ನಾಯಕರು, ಕಾರ್ಯಾಧ್ಯಕ್ಷರು, ಬೆಂಗಳೂರು ನಗರ ಪ್ರದೇಶದ ನಾಯಕರ ಜತೆ ಚರ್ಚೆ ಮಾಡುತ್ತೇನೆ. ನಾವು ಕೋವಿಡ್ ಮಾರ್ಗಸೂಚಿ ಅನುಸರಿಸುತ್ತೇವೆ. ನಿಯಮ ಪಾಲಿಸುತ್ತೇವೆ. 100 ಜನ ವೈದ್ಯರ ತಂಡ ಅದಕ್ಕೆ ಸಿದ್ಧವಿದೆ.

ಸರಕಾರ ವರ್ತಕರು, ವ್ಯಾಪಾರಸ್ಥರ ಮೇಲೆ ಗದಾಪ್ರಹಾರ ಮಾಡುತ್ತಿರುವುದನ್ನು ನೋಡಿ ಸಂಕಟವಾಗುತ್ತಿದೆ. ಅವರ ಬದುಕು ಏನಾಗಬೇಕು. ಎರಡು ವರ್ಷಗಳಿಂದ ಅವರು ಸಾಯುತ್ತಿದ್ದಾರೆ. ಇವರ ರಾಜಕೀಯಕ್ಕಾಗಿ, ನಮ್ಮ ಮೇಲಿನ ದ್ವೇಷಕ್ಕೆ, ವರ್ತಕರು, ವ್ಯಾಪಾರಸ್ಥರು, ಪ್ರವಾಸೋದ್ಯಮದವರು, ಬೀದಿ ವ್ಯಾಪಾರಿಗಳಿಗೆ ಬರೆ ಹಾಕುತ್ತಿದ್ದಾರೆ. ಸರ್ಕಾರ ಅವರನ್ನು ಹತ್ಯೆ ಮಾಡುತ್ತಿದೆ. ಮರ್ಡರ್ ಮಾಡುತ್ತಿದೆ. ಈ ಸರಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ. ಅವರ ಶಾಪ ತಡೆದುಕೊಳ್ಳಲು ಇವರಿಗೆ ಸಾಧ್ಯವಿಲ್ಲ.

ನನ್ನ ಮೇಲೆ, ಶಾಸಕರ ಮೇಲೆ, ಪರಿಷತ್ ಸದಸ್ಯರ ಮೇಲೆ ವಿಪತ್ತು ನಿರ್ವಹಣೆ ಪ್ರಕರಣ ದಾಖಲಿಸಿದ್ದಾರೆ. ಇವರು ಮನುಷ್ಯರಾ? ಅವರ ಪಕ್ಷದ ನಾಯಕರು ಪ್ರತಿಭಟನೆ, ಮೆರವಣಿಗೆ ಮಾಡಿದರು. ನಿನ್ನೆ ಪ್ರಧಾನಿಗಳು ದೊಡ್ಡ ದೊಡ್ಡ ಸಮಾವೇಶ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಡಿ.ಕೆ. ಸುರೇಶ್ ಅವರು ಈಗ ನನ್ನನ್ನು ಭೇಟಿ ಮಾಡಿ, ರಾಮನಗರಕ್ಕೆ ನಡಿಗೆ ಮಾರ್ಗ ನೋಡಲು ಹೋಗುತ್ತಿದ್ದಾರೆ’ ಎಂದರು.

ಜನರ ಪ್ರಾಣ ಮುಖ್ಯ ಎಂಬ ಸಚಿವ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ, ‘ಅವರಿಗೆ ಜನರ ಪ್ರಾಣ ಮುಖ್ಯವಲ್ಲ. ಅವರ ಪಕ್ಷ ಮುಖ್ಯ. ಅವರು ಜನರ ಪ್ರಾಣ ತೆಗೆಯುತ್ತಿದ್ದಾರೆ’ ಎಂದರು.

ಪಾದಯಾತ್ರೆ ಹೆಸರು ಬದಲಾಗುತ್ತದೇಯೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದನ್ನು ಯಾತ್ರೆ ಎಂದು ಯಾಕೆ ಕರೆಯುತ್ತೀದ್ದೀರಿ? ಇದು ನೀರಿಗೋಸ್ಕರ ನಡಿಗೆ’ ಎಂದರು.

ಹಾಗಾದ್ರೆ ಹೆಸರು ಬದಲಿಸುತ್ತೀರಾ, ವಾಹನದ ಮೇಲೆ ಪಾದಯಾತ್ರೆ ಹೆಸರಿದೆಯಲ್ಲಾ ಎಂಬ ಪ್ರಶ್ನೆಗೆ, ‘ಹೆಸರು ಬದಲಿಸಿಕೊಳ್ಳೋಣ ಬಿಡಿ. ನೀರಿಗಾಗಿ ನಡಿಗೆ, Walk for Water’ ಎಂದು ಉತ್ತರಿಸಿದರು.

ವರದಿ: ಡಿ.ಎಲ್. ಹರೀಶ್, ಬೆಂಗಳೂರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BangaloreCovidD K ShivakumarKannada NewsKannada News LiveKannada News OnlineKannada News WebsiteKannada WebsiteLatest News KannadaLockdownNews in KannadaNews KannadaState NewsWalk for Waterಕೋವಿಡ್ಡಿ.ಕೆ. ಶಿವಕುಮಾರ್ನೀರಿಗಾಗಿ ನಡಿಗೆ‌.ಬೆಂಗಳೂರುಲಾಕ್ ಡೌನ್
Share197Tweet123Send
Previous Post

ಕೋವಿಡ್ ನಿಯಂತ್ರಣದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಅವಶ್ಯಕತೆ ಇಲ್ಲ: ಸಚಿವ ಈಶ್ವರಪ್ಪ

Next Post

ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ ದೊರೆತಾಗ ಸಮಾಜದ ಸದೃಢ ಸಾಧ್ಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ ದೊರೆತಾಗ ಸಮಾಜದ ಸದೃಢ ಸಾಧ್ಯ

ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ ದೊರೆತಾಗ ಸಮಾಜದ ಸದೃಢ ಸಾಧ್ಯ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

March 17, 2026
ಶಿವಮೊಗ್ಗ | ಪ್ರಕೃತಿ ವಿಷಯದ ಚಿತ್ರಕಲೆ ಸ್ಪರ್ಧೆ | ತೀರ್ಥಹಳ್ಳಿಯ ಮೂವರಿಗೆ ಮೊದಲ 3 ಬಹುಮಾನ

ಶಿವಮೊಗ್ಗ | ಪ್ರಕೃತಿ ವಿಷಯದ ಚಿತ್ರಕಲೆ ಸ್ಪರ್ಧೆ | ತೀರ್ಥಹಳ್ಳಿಯ ಮೂವರಿಗೆ ಮೊದಲ 3 ಬಹುಮಾನ

March 17, 2026
ರಾಜ್ಯದಲ್ಲಿ ಕಲುಷಿತ ನೀರಿನ ಆತಂಕ: ಪ್ರತಿ ಜಿಲ್ಲೆಯಲ್ಲೂ NABL ಮಾನ್ಯತೆ ಪಡೆದ ಲ್ಯಾಬ್ ಸ್ಥಾಪನೆಗೆ ಡಾ. ಧನಂಜಯ ಸರ್ಜಿ ಆಗ್ರಹ

ರಾಜ್ಯದಲ್ಲಿ ಕಲುಷಿತ ನೀರಿನ ಆತಂಕ: ಪ್ರತಿ ಜಿಲ್ಲೆಯಲ್ಲೂ NABL ಮಾನ್ಯತೆ ಪಡೆದ ಲ್ಯಾಬ್ ಸ್ಥಾಪನೆಗೆ ಡಾ. ಧನಂಜಯ ಸರ್ಜಿ ಆಗ್ರಹ

March 17, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

March 17, 2026
ಬೆಂಗಳೂರು | ರಣಹದ್ದು ಪಕ್ಷಿಧಾಮದಲ್ಲಿ ಎಂಇಎಸ್ ಕಾಲೇಜು ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಮುಕ್ತ ಶಿಬಿರ

ಬೆಂಗಳೂರು | ರಣಹದ್ದು ಪಕ್ಷಿಧಾಮದಲ್ಲಿ ಎಂಇಎಸ್ ಕಾಲೇಜು ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಮುಕ್ತ ಶಿಬಿರ

March 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL