ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ವರದಿ: ಡಿ.ಎಲ್. ಹರೀಶ್
ನಮಗೆ ಜಾಸ್ತಿ ಬಹುಮತ ಎಂದು ಈ ಸರ್ಕಾರ ದರ್ಪ ತೋರಿಸುತ್ತಿದೆ. ದಪ್ಪ ಚರ್ಮದ ಈ ಸರ್ಕಾರಕ್ಕೆ ಬುದ್ಧಿ ಕಲಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ #Nikhil Kumaraswamy ಅವರು ಹೇಳಿದ್ದಾರೆ.
ಜನ ಇವರು ಏನೋ ಒಳ್ಳೆಯದು ಮಾಡುತ್ತಾರೆ ಎಂದು ವೋಟು ಹಾಕಿ ಗೆಲ್ಲಿಸಿದರು. ಆದರೆ ಸುಲಿಗೆಯನ್ನೇ ಮೂಲ ಮಂತ್ರ ಮಾಡಿಕೊಂಡಿರುವ ಈ ಸರ್ಕಾರ, ಜನರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದೆ. ನಾವು ಸುಮ್ಮನೆ ಇರಲು ಸಾಧ್ಯ ಇಲ್ಲ ಎಂದು ಗುಡುಗಿದರು.
ಐದು ವರ್ಷ ಕಾಲ ಜನ ಹಿಂಸೆ ಅನುಭವಿಸಬೇಕಾಗಿದೆ. ಈಗಾಗಲೇ ಎರಡು ವರ್ಷ ಚಿತ್ರಹಿಂಸೆ ಕೊಟ್ಟಾಗಿದೆ. ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಅದಕ್ಕಾಗಿಯೇ ಕಾಂಗ್ರೆಸ್ ಚುನಾವಣೆ ನಡೆಸಲು ಧೈರ್ಯ ಮಾಡುತ್ತಿಲ್ಲ. ವಿಪಕ್ಷ ಪ್ರತಿಭಟನೆ ಮಾಡಿದಾಗ, ಅದಕ್ಕೆ ಪ್ರತಿಯಾಗಿ ಸರ್ಕಾರವೇ ಇನ್ನೊಂದು ಕಾರ್ಯಕ್ರಮ ರೂಪಿಸುತ್ತದೆ. ದಾರಿ ತಪ್ಪಿಸುವ ಕೆಲಸ ಇದು. ಕೆಪಿಸಿಸಿ ಅಧ್ಯಕ್ಷರದ್ದೇ ಇದೆಲ್ಲ ತಂತ್ರಗಾರಿಕೆ. ಅದರಲ್ಲಿ ನಿಸ್ಸೀಮರು ಅವರು. ಅಂತಿಮವಾಗಿ ಜನರ ಮುಂದೆ ಜನಪ್ರತಿನಿಧಿಗಳು ತಲೆ ಬಾಗಲೇಬೇಕು ಎಂದು ಅವರು ಕಿಡಿಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post