ಕಲ್ಪ ಮೀಡಿಯಾ ಹೌಸ್ | ಬೆಂಗಳೂರು, ವೈಟ್ ಫೀಲ್ಡ್ |
ಇಲ್ಲಿನ ಪ್ರತಿಷ್ಠಿತ ಮೆಡಿಕವರ್ ಆಸ್ಪತ್ರೆ ವತಿಯಿಂದ ವೈದ್ಯರು ಮತ್ತು ನರ್ಸ್’ಗಳಿಗಾಗಿ ನವಜಾತ ಶಿಶು ಪುನಶ್ಚೇತನ ಕಾರ್ಯಕ್ರಮವನ್ನು (Basic NRP) ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ತರಬೇತಿ ಕಾರ್ಯಕ್ರಮವು ವೈದ್ಯಕೀಯ ವೃತ್ತಿಪರರಲ್ಲಿ ಜೀವ ರಕ್ಷಣಾ ಕೌಶಲ್ಯಗಳನ್ನು ವೃದ್ಧಿಸಲು, ಹಾಗೂ ನವಜಾತ ಶಿಶುಗಳ ಉತ್ತಮ ಆರೈಕೆಗಾಗಿ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲು ರೂಪಗೊಳಿಸಲಾಗಿದೆ.

ಬೇಸಿಕ್ ಎನ್‌ಆಪಿರ್ ತರಬೇತಿ, ಜನನ ಕ್ಷಣದಲ್ಲೇ ಉದ್ಭವಿಸಬಹುದಾದ ತುರ್ತು ಪರಿಸ್ಥಿತಿಗಳಿಗೆ ತ್ವರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ನೀಡಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ವೈದ್ಯರು ಹಾಗೂ ನರ್ಸುಗಳಿಗೆ ಒದಗಿಸುತ್ತದೆ. ಹೊಸಜಾತ ಶಿಶುಗಳ ಜೀವ ಉಳಿಸುವ ಉನ್ನತ ತಂತ್ರಗಳನ್ನು ಕಲಿಸುವ ಮೂಲಕ, ಮೆಡಿಕವರ್ ಆಸ್ಪತ್ರೆ ನವಜಾತ ಶಿಶುಗಳ ಉತ್ತಮ ಫಲಿತಾಂಶ ಮತ್ತು ಸುರಕ್ಷಿತ ಆರೈಕೆಗೆ ತನ್ನ ಬದ್ಧತೆಯನ್ನು ಮುಂದುವರೆಸುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post