ಕಲ್ಪ ಮೀಡಿಯಾ ಹೌಸ್ | ಬೆಂಗಳೂರು, ವೈಟ್ ಫಿಲ್ದ್ |
ಮಧ್ಯಪ್ರಾಚ್ಯದ ರೋಗಿಯೊಬ್ಬರು ಕೆಮ್ಮು, ಉಸಿರಾಟದ ತೊಂದರೆ ಮತ್ತು ಬಲ ಶ್ವಾಸಕೋಶದಲ್ಲಿ ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರಾಥಮಿಕ ಎಕ್ಸ್-ರೆ ಮತ್ತು ಸಿಟಿ ಸ್ಕ್ಯಾನ್‌ನಲ್ಲಿ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ #Lung cancer ಇದೆ ಎಂದು ಅನುಮಾನ ವ್ಯಕ್ತವಾಗಿತ್ತು.
ವಾರ್ಷಿಕ ಹೆಲ್ತ್ ಚೆಕ್ ಅಪ್ ಮಾಡಿಸಿದಾಗ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದರು .ಆದರೆ, ಅವರು ಮೆಡಿಕವರ್ ಆಸ್ಪತ್ರೆಯ #Medicover Hospital ಶ್ವಾಸಕೋಶ ತಜ್ಞರಾದ ಡಾ. ಮಂಜುನಾಥ್ ಬಿ.ಜಿ, ಅವರನ್ನು ಸಂಪರ್ಕಿಸಿದಾಗ, ಡಾಕ್ಟರ್ ಅವರು ಎಲ್ಲಾ ವರದಿಗಳನ್ನು ಪರಿಶೀಲಿಸಿ ಶ್ವಾಸಕೋಶದ ಕ್ಯಾನ್ಸರ್ ಇಲ್ಲ ಎಂದು ಖಚಿತಪಡಿಸಿದರು. ಮುಂದಿನ ತಪಾಸಣೆಯಲ್ಲಿ, ರೋಗಿಗೆ ಅಲರ್ಜಿ ಬ್ರಾಂಕೋಪಲ್ಮನರಿ ಆಸ್ಪರ್ಜಿಲೋಸಿಸ್ (ABPA) ಎಂಬ ಸ್ಥಿತಿ ಕಂಡುಬಂತು.

ಈ ಕುರಿತು ಮಾತನಾಡಿದ ಡಾ. ಮಂಜುನಾಥ್ ಬಿ.ಜಿ ಅವರು ಹೇಳಿದರು: “ಸರಿಯಾದ ಸಮಯಕ್ಕೆ ಸೂಕ್ತ ವೈದ್ಯರ ಹತ್ರ ಚಿಕಿತ್ಸೆ ಪಡೆದರೇ ಅನಗತ್ಯವಾಗಿ ಟೆಸ್ಟ್ ಮಾಡಿಸುವ ಅವಶ್ಯಕತೆ ಇರೋದಿಲ್ಲ.”
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post