ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಧಾನ ಪರಿಷತ್’ಗೆ ಕಾಂಗ್ರೆಸ್’ನಿಂದ ಸ್ಪರ್ಧಿಸಿರುವ ಯೂಸುಫ್ ಶರೀಫ್ ಅವರು ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿ ಎನಿಸಿಕೊಂಡಿದ್ದಾರೆ.
ವಿಧಾನ ಪರಿಷತ್’ಗೆ ಸ್ಪರ್ಧಿಸಿರುವ ಅವರು ಸಲ್ಲಿಸಿರುವ ಅಫಿಡವಿಟ್’ನಲ್ಲಿ 1,744 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಅತ್ಯಂತ ಶ್ರೀಮಂತ ರಾಜಕಾರಣಿ ಎನಿಸಿಕೊಂಡಿದ್ದಾರೆ.
ಇವರು, ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್’ನಲ್ಲಿ ಪ್ರಕಾರ ಶರೀಫ್ ಅವರಿಗೆ ಇಬ್ಬರು ಪತ್ನಿಯರು ಮತ್ತು ಐವರು ಮಕ್ಕಳು. ಇವರು ಒಟ್ಟು 1,744 ಕೋಟಿ ರೂಪಾಯಿಯ ಆಸ್ತಿ ಹೊಂದಿದ್ದು, ಷರೀಫ್ ಅವರೇ ಸ್ವತಃ 1,640 ಕೋಟಿ ರೂಪಾಯಿ ಮೌಲ್ಯದ ಭೂಮಿ ಹೊಂದಿದ್ದಾರೆ. ಇದರಲ್ಲಿ ಕೃಷಿಭೂಮಿಯೇ ಅಧಿಕ. ಶರೀಫ್ ಅವರ ಘೋಷಿತ ಆಸ್ತಿಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (2018ರಲ್ಲಿ 840 ಕೋಟಿ ರೂಪಾಯಿ), ಬಿಜೆಪಿ ಎಂಎಲ್’ಸಿ ಎಂ.ಟಿ.ಬಿ.ನಾಗರಾಜ್ (2020ರಲ್ಲಿ 880 ಕೋಟಿ) ಅವರ ಆಸ್ತಿಗಿಂತಲೂ ಅಧಿಕ.
ಐದನೆಯ ತರಗತಿವರೆಗೆ ಓದಿದ್ದ ಶರೀಫ್, ಉಮ್ರಾ ಡೆವಲಪರ್ಸ್ ಎಂಬ ರಿಯಾಲ್ಟಿ ಕಂಪನಿಯ ಮಾಲೀಕ. ಇತರ ಐದು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಅವರು ಪಾಲು ಹೊಂದಿದ್ದಾರೆ. ಇವರು 12 ಬ್ಯಾಂಕ್ ಖಾತೆಗಳಲ್ಲಿ 67 ಕೋಟಿ ರೂಪಾಯಿಗಳ ಹೊಣೆಗಾರಿಕೆ ಘೋಷಿಸಿಕೊಂಡಿದ್ದಾರೆ.
ಅವರ ಹೇಳಿಕೆಯ ಪ್ರಕಾರವೇ, ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 13.43 ಕೋಟಿ ರೂಪಾಯಿ ಬಾಕಿ ತೆರಿಗೆ ವಿಧಿಸಿದ್ದರು. ಇದರ ವಿರುದ್ಧ ಆದಾಯ ತೆರಿಗೆ ಆಯುಕ್ತರ ಎದುರು ಮನವಿ ಸಲ್ಲಿಸಿದ್ದು, ಅದನ್ನು ಸ್ವೀಕರಿಸಲಾಗಿದೆ. ಪ್ರಕರಣದ ವಿಚಾರಣೆ ಇನ್ನೂ ನಡೆಯಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post