ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಫೈನಲ್‌ಸ್ ಹಂತ ತಲುಪಿದ್ದು, ಪಾಕಿಸ್ಥಾನ ತಂಡವನ್ನು ಮೆಟ್ಟಿ ಬಾಂಗ್ಲಾದೇಶದ ಫೈನಲ್‌ಸ್ ಪ್ರವೇಶ ಮಾಡಿದೆ. ಇದರ ಹಿನ್ನೆಲೆಯಲ್ಲಿ ಅಂತಿಮ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಸೆಣೆಸಲಿದೆ.
ನಿನ್ನೆ ದುಬೈನಲ್ಲಿ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ 37 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಬಾಂಗ್ಲಾ ನೀಡಿದ 239 ರನ್ ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಪಾಕ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 202 ರನ್ ಅಷ್ಟೇ ಪೇರಿಸಲು ಸಾಧ್ಯವಾಯಿತು.
ಬಾಂಗ್ಲಾ ಆಟಗಾರರ ಅತ್ಯುತ್ತಮ ಪ್ರದರ್ಶನ ತಂಡವನ್ನು ಫೈನಲ್ ಹಂತಕ್ಕೆ ತಂದು ನಿಲ್ಲಿಸಿದೆ. ಇನ್ನು ನಾಳೆ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಲಿವೆ.
ಬಾಂಗ್ಲಾ ಪರ ಬ್ಯಾಟಿಂಗ್ ನಲ್ಲಿ ಮುಶ್ಫಿಕರ್ ರಹೀಮ್ 99, ಮಹಮ್ಮದ್ ಮಿಥುನ್ 60 ಮತ್ತು ಮೊಹಮ್ಮದುಲ್ಲಾ 25 ರನ್ ಗಳಿಸಿದ್ದಾರೆ. ಪಾಕ್ ಪರ ಬ್ಯಾಟಿಂಗ್ ನಲ್ಲಿ ಇಮಾಮ್ ಉಲ್ ಹಕ್ 83, ಶೋಯಿಬ್ ಮಲಿಕ್ 30 ಮತ್ತು ಆಸೀಫ್ ಅಲಿ 31 ರನ್ ಪೇರಿಸಿದ್ದಾರೆ.
Discussion about this post