ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರಿಗೆ ನೋಟೀಸ್ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ರೈತರಿಗೆ ನೋಟೀಸ್ ಕೊಟ್ಟಿದ್ದಾರೆ. ಲೀಡ್ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರೈತರು ತೆಗೆದುಕೊಂಡಿದ್ದು 10 ಲಕ್ಷದಷ್ಟು ಸಾಲ. ಬಡ್ಡಿ ಸೇರಿ 1 ಕೋಟಿಯಷ್ಟು ಕಟ್ಟಬೇಕು ಅಂತಾ ನೋಟೀಸ್ ಕೊಟ್ಟಿದ್ದಾರೆ. ಒಂದೊಂದು ಬ್ಯಾಂಕಿನ ಸಾಲ ವ್ಯವಸ್ಥೆ ಒಂದೊಂದು ರೀತಿ ಇದೆ. ಯಾವುದು ಕಡಿಮೆ ಆಗ್ತದೋ ಆ ರೀತಿ ಮರುಪಾವತಿ ಮಾಡಲು ತಿಳಿಸಿದ್ದೇನೆ ಎಂದರು.

ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ವಿಚಾರ ಕುರಿತು ಪ್ರತಿಕ್ರಿಸಿದ ಅವರು, ಷಡಾಕ್ಷರಿ ವರ್ಗಾವಣೆ ಸರ್ಕಾರದ ತೀರ್ಮಾನ. ಸರ್ಕಾರದಲ್ಲಿ ವರ್ಗಾವಣೆ ಮಾಡಿದ್ದಾರೆ. ನಾನು ಸರ್ಕಾರದಲ್ಲಿ ಇದ್ದಾನೆ ಇಲ್ಲ ಅಂತಾ ಹೇಳಕ್ಕೆ ಆಗ್ತದಾ? ಅದೇನು ದೊಡ್ಡ ವಿಷಯ ಏನಲ್ಲ. ಅವರ ಮೇಲೆ ಹಗರಣಗಳ ಆರೋಪ ಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲ್ಲ, ಉಸ್ತುವಾರಿ ಸಚಿವರು ಯಾರು ಗೊತ್ತಿಲ್ಲ ಆರೋಪಕ್ಕೆ ಪ್ರತಿಕ್ರಿಸಿದ ಅವರು, ಅದಕ್ಕೆಲ್ಲಾ ನಾನು ಉತ್ತರ ಕೊಡುವುದಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post