ಕಲ್ಪ ಮೀಡಿಯಾ ಹೌಸ್ | ಬಂಟ್ವಾಳ |
ಬಂಟ್ವಾಳ ತಾಲೂಕು, ವಿಟ್ಲಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಪೈಸಾರಿ ಇಲ್ಲಿ ಶ್ರೀ ನಾಗದೇವರಿಗೆ ಬ್ರಹ್ಮಕಲಸ ಹಾಗೂ ಶ್ರೀ ರಕ್ತೇಶ್ವರೀ, ಗುಳಿಗ ದೈವದ ಮತ್ತು ರಕ್ಷಬ್ರಹ್ಮ ಸಾನಿಧ್ಯ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಳಸ ಕಾರ್ಯಕ್ರಮವು ವೇದಮೂರ್ತಿ ಬ್ರಹ್ಮಶ್ರೀ ಕುಂಟುಕುಡೇಲು ಶ್ರೀ ರಘುರಾಮ ತಂತ್ರಿ ಇವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮಕ್ಕೆ ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರ, ಕಣಿಯೂರು – ಕನ್ಯಾನ ಇಲ್ಲಿಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಭೇಟಿ ನೀಡಿ ಆಶೀರ್ವದಿಸಿದರು. ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ ಇವರು ಭಜನಾ ಸೇವೆ ನಡೆಸಿಕೊಟ್ಟರು.
ವಿಟ್ಲ ಅರಮನೆಯ ಕೃಷ್ಣಯ್ಯ ಕೆ., ಶ್ರೀ ಕೃಷ್ಣ ವರ್ಮ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು, ಬಿಜೆಪಿ ಪಕ್ಷದ ಪ್ರಮುಖರು, ಗಣ್ಯರು, ಸ್ಥಳೀಯ ಸಂಘ ಸಂಸ್ಥೆಯ ಪ್ರಮುಖರು, ಊರ ಪರವೂರ ಭಕ್ತಾದಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದ ಎಲ್ಲಾ ಭಕ್ತಾದಿಗಳಿಗೆ ಯಮುನಾ ಮತ್ತು ಮೋನಪ್ಪ ನಾಯ್ಕ ಪೂರ್ಲಪ್ಪಾಡಿ ಪೈಸಾರಿ ಮನೆಯವರು ಹಾಗೂ ಶ್ರೀ ಮಲರಾಯಿ ದೇವಸ್ಥಾನ ಆಡಳಿತ ಟ್ರಸ್ಟ್ (ರಿ.) ಪೂರ್ಲಪ್ಪಾಡಿ ಇವರು ಧನ್ಯವಾದಳನ್ನು ಸಲ್ಲಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post