ಕಲ್ಪ ಮೀಡಿಯಾ ಹೌಸ್
ಬಂಟ್ವಾಳ: ಬೈಕ್ ಚಾಲನೆಯಲ್ಲಿಟ್ಟು ಸವಾರ ನಾಪತ್ತೆಯಾಗಿರುವ ಘಟನೆ ಬಂಟ್ವಾಳದ ನೇತ್ರಾವತಿ ಸೇತುವೆಯಲ್ಲಿ ನಡೆದಿದ್ದು, ಸವಾರ ನದಿಗೆ ಧುಮುಕಿರಬಹುದು ಎಂದು ಶಂಖೆ ವ್ಯಕ್ತಪಡಿಸಲಾಗಿದೆ.
ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29) ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದು, ಸ್ಥಳೀಯ ಈಜುಗಾರರು ಸವಾರನ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸತ್ಯವೇಲು, ಇದಕ್ಕೂ ಮುನ್ನ ಇದೇ ರೀತಿಯ ಕೃತ್ಯ ಎಸಗಲು ಇದೇ ಜಾಗಕ್ಕೆ ಬಂದಿದ್ದನ್ನು ಗಮನಿಸಿ, ಆತನನ್ನು ರಕ್ಷಿಸಿದ್ದರು. ಬುಧವಾರ ಈತನ ಬೈಕ್ ಪಾಣೆ ಮಂಗಳೂರು ಸೇತುವೆ ಮೇಲೆ ಕಂಡುಬಂದ ಹಿನ್ನೆಲಯೆಲ್ಲಿ ಸ್ಥಳೀಯರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಈತನ ನಾಪತ್ತೆ ಕುರಿತು ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಬಂಟ್ವಾಳದಲ್ಲಿ ಸತ್ಯವೇಲು ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post