ಕಲ್ಪ ಮೀಡಿಯಾ ಹೌಸ್ | ಬಂಟ್ವಾಳ |
ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಫೆ.18ರಂದು ಕುದ್ರಿಯ ಶ್ರೀ ಮಲರಾಯಿ ದೈವದ ವರ್ಷಾವಧಿ ಜಾತ್ರೆ ಜರುಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ರಾತ್ರಿ 7ಗಂಟೆಗೆ ಕೊಟ್ಟದಾಯನ ನೇಮ, 9ಕ್ಕೆ ಅನ್ನಸಂತರ್ಪಣೆ, 10ಕ್ಕೆ ವಲಸರಿ ನೇಮ, ಹಾಗೂ ರಾತ್ರಿ 12ರಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ, ‘ಕಲಾಸಂಗಮ’ ಕಲಾವಿದರಿಂದ, ತುಳು ರಂಗಭೂಮಿಯಲ್ಲಿ ಮತ್ತೊಂದು ಸಂಚಲನ ಮೂಡಿಸಿದ, ಸ್ವರಾಜ್ ಶೆಟ್ಟಿ ಅಭಿನಯಿಸುವ, ಶಿವದೂತೆ ಗುಳಿಗೆ ವಿಭಿನ್ನ ಶೈಲಿಯ ತುಳು ನಾಟಕ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post