ಕಲ್ಪ ಮೀಡಿಯಾ ಹೌಸ್ | ಬಂಟ್ವಾಳ |
ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಶ್ರೀ ಮಹಮ್ಮಾಯೀ ಭಜನಾ ಮಂದಿರ, ನಾಗವನ – ಕುಂಟ್ರಕಲದಲ್ಲಿ ಜರುಗಿತು.
ಸ್ಥಳೀಯ ಮಕ್ಕಳಿಂದ ಹಿರಿಯರವರೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೊಳ್ನಾಡು ಮಂಡಲ ಇದರ ನೇತೃತ್ವದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ಅಲ್ಲದೆ ವಿಶೇಷ ಭಜನಾ ಸೇವೆಯು ಜರುಗಿತು. ಈ ಸಮಯ ಪುಟಾಣಿ ಮಕ್ಕಳು ಶ್ರೀ ಕೃಷ್ಣ ಹಾಗೂ ರಾಧಾ ವೇಷಧಾರಿಗಳಾಗಿ ಭಜನೆಗೆ ಹೆಜ್ಜೆ ಹಾಕಿದರು.
Also read: ರೈತರನ್ನು ಮರೆತು ಗ್ಯಾರಂಟಿಗಳಲ್ಲೇ ಮುಳುಗಿರುವ ರಾಜ್ಯಸರ್ಕಾರ: ಕಾಂಗ್ರೆಸ್ ವಿರುದ್ಧ ಕೆಎಸ್‌ಈ ವಾಗ್ಧಾಳಿ
ಕುಂಟ್ರಕಲ ಸೌಮ್ಯ-ಜಯರಾಮ ನಾಯ್ಕ ದಂಪತಿಗಳ ಮಗಳಾದ ಸಾಕ್ಷಿತಾ ಜೆ.ಎಸ್. ಇವಳ ಹುಟ್ಟು ಹಬ್ಬವನ್ನು ಹಿಂದೂ ಧಾರ್ಮಿಕ ಪದ್ಧತಿಯಂತೆ ಆಚರಿಸಲಾಯಿತು. ಬಳಿಕ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭ ಭಜನಾ ಮಂಡಳಿಯ ಶ್ರೀ ಮಹಮ್ಮಾಯೀ ಮಾತೃ ಮಂಡಳಿ, ಕುಂಟ್ರಕಲ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶಿವಾಜಿ ಶಾಖೆ – ಕುಂಟ್ರಕಲ ಮತ್ತು ವಕ್ರತುಂಡ ಫ್ರೆಂಡ್ಸ್, ಕುಳಾಲು – ಕಾನ ಇದರ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post