ಕಲ್ಪ ಮೀಡಿಯಾ ಹೌಸ್ | ಪಾಟ್ನಾ |
ಭಯೋತ್ಪಾದನೆ ಮತ್ತೆ ತಲೆ ಎತ್ತಿದರೆ ಹುತ್ತದಿಂದ ಹೊರಕ್ಕೆ ಎಳೆದು ತುಳಿದು ಹಾಕುತ್ತೇವೆ ಎಂದು ಪಾಕಿಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
Also Read>> ಮಹಿಷಿಯಲ್ಲಿ ಶ್ರೀ ಸತ್ಯಸಂದ ಗುರುಗಳ ಆರಾಧನಾ ಮಹೋತ್ಸವ ಸಂಪನ್ನ
ಈ ಕುರಿತಂತೆ ಮಾತನಾಡಿರುವ ಅವರು, ಭಯೋತ್ಪಾದನೆ ವಿರುದ್ಧದ ಭಾರತದ ಯುದ್ಧ ಇನ್ನೂ ನಿಂತಿಲ್ಲ ಎಂದು ಪಾಕಿಸ್ಥಾನವನ್ನು ಹಾವಿಗೆ ಹೋಲಿಸಿ ನೇರ ಎಚ್ಚರಿಕೆ ನೀಡಿದ್ದಾರೆ.
ಪಹಲ್ಗಾಮ್’ನಲ್ಲಿ ನಡೆದ ಭೀಕರ ದಾಳಿಯ ಒಂದು ದಿನದ ನಂತರ ನಾನು ಬಿಹಾರಕ್ಕೆ ಬಂದಿದ್ದೆ. ಅಲ್ಲಿ ನಮ್ಮ ಅನೇಕ ಸಹೋದರಿಯರು ತಮ್ಮ ಗಂಡಂದಿರನ್ನು ಕಳೆದುಕೊಂಡಿದ್ದರು. ಅಪರಾಧಿಗಳಿಗೆ ಅವರು ಕನಸಿನಲ್ಲಿಯೂ ಊಹಿಸಲಾಗದ ಶಿಕ್ಷೆಯನ್ನು ನೀಡಲಾಗುವುದು ಎಂದು ನಾನು ಭರವಸೆ ನೀಡಿದ್ದೆ. ಇಂದು, ಭರವಸೆಯನ್ನು ಈಡೇರಿಸಿದ ನಂತರ ನಾನು ಬಿಹಾರಕ್ಕೆ ಮತ್ತೆ ಬಂದಿದ್ದೇನೆ ಎಂದಿದ್ದಾರೆ.
ಶತ್ರುಗಳು ಆಪರೇಷನ್ ಸಿಂಧೂರ ಶಕ್ತಿಯನ್ನು ನೋಡಿದ್ದಾರೆ. ಆಪರೇಷನ್ ಸಿಂಧೂರ ಭಾರತದ ಬತ್ತಳಿಕೆಯಿಂದ ಬಿಟ್ಟ ಕೇವಲ ಒಂದು ಬಾಣ ಅಷ್ಟೇ. ಭಯೋತ್ಪಾದನೆ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ ಎಂದು ಮೋದಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಪಾಕಿಸ್ತಾನ ಸೇನೆಯ ರಕ್ಷಣೆಯಲ್ಲಿ ಭಯೋತ್ಪಾದಕರು ಸುರಕ್ಷಿತ ಭಾವನೆ ಹೊಂದಿದ್ದರು. ಆದರೆ ಭಾರತೀಯ ಪಡೆಗಳು ಅವರನ್ನು ಬಲಿ ಹಾಕಿದ್ದಾರೆ. ನಾವು ಪಾಕಿಸ್ತಾನದ ವಾಯುನೆಲೆಗಳು ಮತ್ತು ಅದರ ಮಿಲಿಟರಿ ಸ್ಥಾಪನೆಗಳನ್ನು ಸಹ ನಾಶಪಡಿಸಿದ್ದೇವೆ. ಇದು ನವ ಭಾರತ ಮತ್ತು ಅದರ ಶಕ್ತಿ ಎಲ್ಲರೂ ನೋಡುವುದಕ್ಕಾಗಿ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















