ಮಂಗಳೂರಿನ ಅಸಾಧಾರಣ ಪ್ರತಿಭೆ ಎಂದು ಗುರುತಿಸಲ್ಪಟ್ಟ ಮಾಸ್ಟರ್ ಸಾರ್ಥಕ್ ಶೈಣೆ ಅವರು ಕೋಡಿಕಲ್ ನಿವಾಸಿ ಗುರುಪ್ರಸಾದ್ ಶೈಣೆ ಹಾಗೂ ಸಾಕ್ಷಿ ಶೈಣೆ ದಂಪತಿಗಳ ಪುತ್ರ.
ಕೆನರಾ ಹೈಯರ್ ಪ್ರೈಮರಿ ಸ್ಕೂಲ್ ಊರ್ವ ಏಳನೆಯ ತರಗತಿ ವಿದ್ಯಾರ್ಥಿ. ತನ್ನ ಐದನೆಯ ತಿಂಗಳಿನಲ್ಲಿ ಕೃಷ್ಣ ವೇಷದಲ್ಲಿ ಪ್ರಥಮ ಬಹುಮಾನ ಪಡೆಯುವ ಮೂಲಕ ತಮ್ಮ ಕಲಾ ಜೀವನವನ್ನು ಪ್ರಾರಂಭಿಸಿದ ಈ ಬಾಲಕ ಇಲ್ಲಿಯವರೆಗೆ ಸುಮಾರು 500ಕ್ಕೂ ಅಧಿಕ ಕಲಾ ಕಾರ್ಯಕ್ರಮಗಳನ್ನು ನೀಡಿದ್ದಾನೆ.
ಮೊದಲಿಗೆ ಅವನ ಶೈಕ್ಷಣಿಕ ಪ್ರಗತಿಯ ಬಗೆ ನೋಡೋಣ. ಕ್ಯಾಂಬ್ರಿಜ್ ಯೂನಿವರ್ಸಿಟಿ ಪ್ರೆಸ್ ನವರು ಆಯೋಜಿಸಿದ ಗಣಿತದ ಒಲಂಪಿಯಾಡ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆದುಕೊಂಡನು ಶೈಕ್ಷಣಿಕ ಎಲ್ಲಾ ವರ್ಷದ ವಿದ್ಯಾಭ್ಯಾಸವನ್ನು 90 ಶೇಕಡಾಕ್ಕಿಂತ ಅಧಿಕ ಅಂಕದೊಂದಿಗೆ ಪೂರೈಸಿದ್ದಾನೆ.
ಸ್ಪೆಲ್ ಬಿ ಪರೀಕ್ಷೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುವ ಈತ ತನ್ನ ಮೂರನೆಯ ವಯಸ್ಸಿನಲ್ಲಿಯೇ ಈಜು ಕಲಿತಿದ್ದಾನೆ. ಅಲ್ಲದೇ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ 23 ಪದಕ ತನ್ನದಾಗಿಸಿಕೊಂಡಿದ್ದಾನೆ.
ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದ ನಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಸರಯು ಬಾಲ ಯಕ್ಷ ವೃಂದ ಕೋಡಿಕಲ್’ನಲ್ಲಿ ಯಕ್ಷಗಾನ ಕಲಿಯುತ್ತಿದ್ದಾನೆ. ಇಲ್ಲಿಯ ತನಕ ನೂರಕ್ಕೂ ಅಧಿಕ ಯಕ್ಷ ಕಾರ್ಯಕ್ರಮ ನೀಡಿರುವ ಈತ, ಮೂರು ಐತಿಹಾಸಿಕ ಪ್ರಸಿದ್ಧ ಜೋಡಾಟಗಳಲ್ಲಿ ಭಾಗವಹಿಸಿದ್ದು, ಬಲರಾಮ ಕುಬೇರ ಕೌರವ ಸುಪಾಶ್ವಕ ಈಶ್ವರ ಬ್ರಹ್ಮ ಹೀಗೆ ಅನೇಕ ಪಾತ್ರಗಳಿಗೆ ಜೀವ ತುಂಬಿದ್ದಾನೆ. ಸಾಧನಾ ಬಳಗ ಶಕ್ತಿನಗರ ನಾಟಕ ಕಲೆಯಲ್ಲಿ ತರಬೇತಿ ಪಡೆಯುತ್ತಿರುವ ಈತ ಅಹಮದಾಬಾದ್ ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಲ್ಲಿ 26 ಕಡೆ ಪ್ರದರ್ಶನ ನೀಡಿ ನಾಟಕರಂಗದಲ್ಲಿ ಮಿಂಚಬಲ್ಲ ಸಾಮರ್ಥ್ಯವುಳ್ಳನಾಗಿದ್ದಾನೆ.
ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಪ್ರಪ್ರಥಮ ಕೊಂಕಣಿ ಮಕ್ಕಳ ಚಲನಚಿತ್ರ ಆವೈಜಾಸಾದಲ್ಲಿ ಪ್ರಮುಖ ಬಾಲನಟನಾಗಿ ಮೊತ್ತ ಮೊದಲ ಬಾರಿಗೆ ಚಿತ್ರರಂಗ ಪ್ರವೇಶಿಸಿದ ತದನಂತರ ತುಳು ಚಲನಚಿತ್ರಗಳಾದ ರೈಟ್ ಬೊಕ್ಕ ಲೆಫ್ಟ್ ನಡುಟು ಕೊಡಂಜಿ ಧಬಕ್ ಧಬಾ ಐಸಾ, ಉಮಿಲ್, ಅಪ್ಪೆ ಟೀಚರ್, ಮೈ ನೇಮ್ ಇಸ್ ಅಣ್ಣಪ್ಪ, ಇನ್ನು ತೆರೆ ಕಾಣಲಿರುವ ತುಳು ಚಲನಚಿತ್ರಗಳಾದ ಎನ್ನ ಪೆಪ್ಪರೆರೆಪೆರೆರೆರೆ ಆಟಿದೊಂಜಿ ದಿನ, ಇಂಗ್ಲಿಷ್ ಚಲನಚಿತ್ರಗಳು. ಕನ್ನಡ ಚಲನಚಿತ್ರಗಳಾದ ಗಂಧದ ಕುಡಿ, ರವಿ ಬಸ್ರೂರ್ ಅವರ ಗಿರಮಿಟ್, ಮೇಲೊಬ್ಬ ಮಾಯಾವಿ, ಒಂದಲ್ಲ ಎರಡಲ್ಲ ಚಲನಚಿತ್ರಗಳು. ಅಪ್ಸರಧಾರ ಕೊಂಕಣಿ ಚಲನಚಿತ್ರ ಹಾಗೂ ಅಪ್ಸರಕೊಂಡ ಕನ್ನಡ ಚಲನಚಿತ್ರದ ಚಿತ್ರೀಕರಣವೂ ಮುಗಿದಿದೆ. ಇದಲ್ಲದೆ ಲುಕ್ ಸ್ವಚ್ಛಭಾರತ್ ಹಾಗೂ ಉರ್ಬ ಕಿರು ಚಿತ್ರಗಳಲ್ಲಿ ಹಾಗೂ ಶ್ರೀ ಸಾಯಿರಾಮ್ ಆಲ್ಬಂ ಸಾಂಗ್’ಗಳಲ್ಲಿ ಅಭಿನಯಿಸಿದ್ದಾನೆ.
ವಿ4 ನ್ಯೂಸ್ ಚಾನೆಲ್’ನ ಅಸಲ್ ಕೈಕುಲು ತುಳು ಧಾರಾವಾಹಿಯಲ್ಲಿ ಅಭಿನಯಿಸಿರುವ ಈತ, ಕೆ ಸ್ಟಾರ್ ಕನ್ನಡ ಚಾನೆಲ್’ನ ಜೂನಿಯರ್ ಡ್ರಾಮಾ ಪಂಟರ್ಸ್‌ನಲ್ಲಿ, ಜೀ ಕನ್ನಡದ ಸರಿಗಮಪ 13ರ ಪ್ರಮೋಶೋನಲ್ಲಿ, ವಿ4 ನ್ಯೂಸ್ ಚಾನಲ್ ನವರ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-2 ನಲ್ಲಿ, ಪ್ರಸ್ತುತ ನಮ್ಮ ಟಿವಿ ಚಾನಲ್’ನ ಕುಸಲದ ಒಸರ್ ಸ್ಟ್ಯಾಂಡಪ್ ಕಾಮಿಡಿ ಶೋ ಸೆಮಿಫೈನಲ್ ತಲುಪಿದ್ದಾನೆ. ಆಕಾಶವಾಣಿ ಜುವೆನೀಲ್ ಪಾನಲ್’ನ ಕಲಾವಿದನಾಗಿ ಬಾನುಲಿ ಧಾರಾವಾಹಿ ಕೆಂಪು ಕಳವೆಯಲ್ಲಿ ಚಿಕ್ಕ ಬೂದನ ಪಾತ್ರ ಹಾಗೂ ಅನೇಕ ಕಾರ್ಯಕ್ರಮಗಳಿಗೆ ಧ್ವನಿ ನೀಡಿದ್ದಾನೆ.
ಐದು ತಿಂಗಳ ಮಗುವಿರುವಾಗಲೇ ತಾಯಿಯ ಪ್ರೋತ್ಸಾಹದಿಂದ ಕೃಷ್ಣ ವೇಷ ಸ್ಪರ್ಧೆ ಹಾಗೂ ಛದ್ಮವೇಷ ಬಹಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಮುನ್ನೂರಕ್ಕೂ ಅಧಿಕ ಬಹುಮಾನ ಪಡೆದಿದ್ದಾನೆ. 2012ರ ಪ್ರಿನ್ಸ್ ಆಫ್ ಮಂಗಳೂರು ಆಗಿ ಆಯ್ಕೆಗೊಂಡ ನಂತರ ಕರಾವಳಿ ಲಿಟಲ್ ಸ್ಟಾರ್ 2017ರ ಕಾರ್ಯಕ್ರಮದಲ್ಲಿ ಉದ್ಗೋಷಕರಾಗಿ ಮಿಂಚಿದ್ದಾನೆ. ಕಾಸ್ಟ್ಯೂಮ್ ಕಾಟೇಜ್ ನ ರೂಪದರ್ಶಿಯಾಗಿದ್ದಾರೆ. ಆಗಸ್ಟ್ 14 2018 ಬಾಲಂಬಟ್’ನಲ್ಲಿ ನಡೆದ ದೇಶಪ್ರೇಮ ಕಾರ್ಯಕ್ರಮದಲ್ಲಿ ತಮ್ಮ ಮೊತ್ತಮೊದಲ ಸ್ವರಚಿತ ಕವನ ವಾಚನ ಮಾಡಿದ್ದಾನೆ. ಇವರ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಸರಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಜಂಟಿ ಸಹಯೋಗದಲ್ಲಿ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದಿನೊಂದಿಗೆ ದೊರಕಿದೆ. ಇದಲ್ಲದೆ ಸಾಂಸ್ಕೃತಿಕ ಕಲಾರತ್ನ ಪ್ರಶಸ್ತಿ, ಅರಳುಮಲ್ಲಿಗೆ ರಾಜ್ಯಪ್ರಶಸ್ತಿ, ಸೌರಭ ಟ್ಯಾಲೆಂಟ್ ಅವರ್ಡ್, ಚೈತನ್ಯ ಶ್ರೀಪ್ರಶಸ್ತಿ, ಪ್ರತಿಭಾ ರತ್ನಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬಸವಜ್ಯೋತಿ ರಾಜ್ಯಪ್ರಶಸ್ತಿ, ಸೌರಭ ರತ್ನ ಪ್ರಶಸ್ತಿ, ಕೊಂಕಣಿ ಲೋಕೋತ್ಸವ ಸಾಧಕ ಪ್ರಶಸ್ತಿ, ತುಳುನಾಡ ಸಿರಿ ಬೊಳ್ಳಿ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಇದರ ಜೊತೆಗೆ ನೂರಕ್ಕೂ ಅಧಿಕ ಸಂಘ-ಸಂಸ್ಥೆಗಳಿಂದ ಸನ್ಮಾನವನ್ನು ಪಡೆದಿದ್ದಾರೆ.
ಪ್ರತಿಭಾ ಕಾರಂಜಿಯ ಯಕ್ಷಗಾನ ಕಂಠಪಾಠ ಸ್ಪರ್ಧೆ ಶಾಲಾ ಚಟುವಟಿಕೆಗಳಲ್ಲಿ ಸದಾ ಮುಂದು ಟ್ಯಾಬ್ಲೋದಲ್ಲಿ ಅಭಿನಯಿಸಿದ ಈತನಿಗೆ ಟ್ಯಾಬ್ಲೊ ಆರ್ಟಿಸ್ಟ್ ಬಿರುದು ದೊರಕಿದೆ. ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾನೆ. ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯ ಅನೇಕ ಶ್ಲೋಕಗಳನ್ನು ನಿರರ್ಗಳವಾಗಿ ಕಂಠಪಾಠ ಹೇಳುವ ಈತ ಪ್ರೇಕ್ಷಕರಿಂದ ಪ್ರಶಂಸೆ ಪಡೆದ ಹೆಮ್ಮೆ ಈತನಿಗಿದೆ.
ಕುಕಿಂಗ್ ನೆಚ್ಚಿನ ಕೆಲಸ ಕುಕ್ಕು ವಿಥೌಟ್ ಫೈಯರ್ ಶೋದಲ್ಲಿ ಭಾಗವಹಿಸಿ ಎಲ್ಲರೂ ಹುಬ್ಬೇರಿಸುವಂತೆ ಅಡುಗೆ ಮಾಡಿ ಸೈಎನಿಸಿಕೊಂಡಿಸಿದ್ದಾನೆ. ಕ್ರಿಕೆಟ್ ಸಾರ್ಥಕ್ ಶೈಣೆಯ ಮೆಚ್ಚಿನ ಕ್ರೀಡೆ ಯಕ್ಷಗಾನ ಮಾತ್ರವಲ್ಲದೆ ತಾಳಮದ್ದಳೆ ಕಾರ್ಯಕ್ರಮವನ್ನು ಅನೇಕ ಕಡೆ ನೀಡಿದ್ದಾನೆ. ಎಳವೆಯಲ್ಲಿ ಹಿಂದೂಸ್ತಾನಿ ಗಾಯನವನ್ನು ತಕ್ಕಮಟ್ಟಿಗೆ ಅಭ್ಯಸಿಸಿದ್ದಾರೆ. ಭವಿಷ್ಯದಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗುವುದು ಇವನ ಗುರಿ. ಇದರೊಂದಿಗೆ ಚಲನಚಿತ್ರಗಳಲ್ಲಿ ಹೀರೋ ಆಗುವ ಆಸೆಯನ್ನು ಇಟ್ಟುಕೊಂಡಿದ್ದಾನೆ. ಒಂದು ವರ್ಷದ ಹಿಂದೆ ತಾಯಿಗಾದ ಅಪಘಾತ ಇವನ ಎಲ್ಲಾ ಆಸಕ್ತಿಯನ್ನು ಒಂದು ಬಾರಿ ಕುಂಠಿತಗೊಳಿಸಿದನು, ಛಲಬಿಡದ ತ್ರಿವಿಕ್ರಮನಂತೆ ತಾನೇ ಸ್ವತಃ ಪ್ರಯತ್ನಿಸಿ ತನ್ನದೇ ಬಲದಿಂದ ತಾಯಿ ತನಗಾಗಿ ಕಂಡ ಕನಸನ್ನು ನನಸು ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾನೆ.
ಇನ್ನು, ವಿಶ್ವ ಕೊಂಕಣಿ ಕೇಂದ್ರದವರು ಪ್ರಾಯೋಜಿಸಿದ ಸ್ವಪ್ನ ಸಾರಸ್ವತ ಕೊಂಕಣಿ ನಾಟಕದಲ್ಲಿ ಭಾಗವಹಿಸಿರುವ ಈತ, ಇದಲ್ಲದೆ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಆಕಾಶವಾಣಿ, ದೈಜಿವಲ್ಡರ್, ಕೊಂಕಣ ವರ್ಡ್ ಹೀಗೆ ಅನೇಕ ಚಾನಲ್’ಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾನೆ. ಸೂರಜ್ ಅವರಿಂದ ಮ್ಯಾಜಿಕ್ ಶೋ ಕಲಿತ ಇವರು ಅದನ್ನು ಪ್ರದರ್ಶನವನ್ನೂ ಸಹ ಮಾಡುತ್ತಾರೆ. ಇತ್ತೀಚೆಗಷ್ಟೇ ನೃತ್ಯ ಕ್ಷೇತ್ರದಲ್ಲೂ ಕಲಿಯಲು ಆರಂಭಿಸಿರುವ ಸಾರ್ಥಕ್ ಶೈಣೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸುತ್ತಿರುವುದು ಮಾತ್ರವಲ್ಲದೆ ಶೈಕ್ಷಣಿಕ ರಂಗದಲ್ಲೂ ಅತ್ಯಂತ ಮುಂದಿದ್ದಾನೆ ಎಂಬುದೇ ಹೆಮ್ಮೆಯ ವಿಷಯ.
ಲೇಖನ, ಚಿತ್ರಕೃಪೆ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post