ಕಲ್ಪ ಮೀಡಿಯಾ ಹೌಸ್ | ಬೀಜಿಂಗ್ |
ಕೋವಿಡ್ ಬಳಿಕ ಮತ್ತೊಂದು ಮಹಾಮಾರಿ ಹರಡುವ ಆತಂಕ ಶುರುವಾಗಿದ್ದು, ಕೋವಿಡ್ ವೈರಸ್ ಪತ್ತೆಯಾಗಿದ್ದ ಅದೇ ಚೀನಾದಲ್ಲಿ ಇದೀಗ ಬಾವಲಿ ಮೂಲಕ ಮನಷ್ಯರಿಗೆ ಹರಡುವ HKU5-CoV-2 ಎಂಬ ವೈರಾಣು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಹೌದು.. COVID-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್‌ನಂತೆಯೇ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅಪಾಯವನ್ನು ಹೊಂದಿರುವ ಹೊಸ ಕೊರೊನಾವೈರಸ್ ಚೀನಾದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP)ವರದಿ ಮಾಡಿದ್ದು, HKU5-CoV-2 ಎಂಬ ಹೊಸ ವೈರಸ್ ಅನ್ನು “ಬ್ಯಾಟ್‌ವುಮನ್” ಎಂದು ಕರೆಯಲ್ಪಡುವ ಪ್ರಸಿದ್ಧ ವಿಜ್ಞಾನಿ ಶಿ ಝೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವು ಕಂಡುಹಿಡಿದಿದೆ.
Also read: ಜಯನಗರ ರಾಯರ ಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ | ಭರತನಾಟ್ಯ ಪ್ರದರ್ಶನ
ಈ ಹೊಸ ವೈರಸ್ SARS CoV-2 ಗೆ ಹೋಲುತ್ತದೆ ಎಂದು ಚೀನಾದ ಸಂಶೋಧಕರು ಕಂಡುಕೊಂಡಿದ್ದು, ಇದು ಕೂಡ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್ ಎನ್ನಲಾಗಿದೆ. ಇದು ಕೋವಿಡ್ ಮಾಡಿದಂತೆಯೇ ACE2 ಎಂಬ ಮಾನವ ಜೀವಕೋಶಗಳಿಗೆ ನುಸುಳಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post