ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಐಸಿಸಿ ಚಾಂಪಿಯನ್ಸ್ ಟ್ರೋಫಿಯ #ICC Champion Trophy ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ #India Vs Pakistan ನಡುವಿನ ಹೈವೋಲ್ಟೇಜ್ ಪಂದ್ಯ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದೆ.
ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆರು ವಿಕೆಟ್ ಗಳ ಗೆಲುವು ಸಾಧಿಸಿದ್ದು, ನಾಳೆ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಗೆಲುವು ಸಾಧಿಸಿದರೆ ಬಹುತೇಕ ಸೆಮಿಫೆನಲ್ ಪ್ರವೇಶಿಸಲಿದೆ. ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ 60 ರನ್ ಗಳ ಹೀನಾಯ ಸೋಲಿನಿಂದ ಕಂಗೆಟ್ಟಿದೆ. ಗ್ರೂಪ್ ಎನಲ್ಲಿ ಸೆಮಿಫೈನಲ್ ಪ್ರವೇಶಿಸಲು ಪಾಕಿಸ್ತಾನಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.
Also read: ಚೀನಾ | ಬಾವಲಿ ಮೂಲಕ ಮನಷ್ಯರಿಗೆ ಹರಡುವ ವೈರಸ್ ಪತ್ತೆ | ಸಂಶೋಧನಾ ವರದಿಯಲ್ಲೇನಿದೆ?
2023ರ ವಿಶ್ವಕಪ್ ನಲ್ಲಿ #2023 World Cup ಅಹಮದಾಬಾದ್ ನಲ್ಲಿ ನಡೆದ ಪಂದ್ಯವೇ ಇವರಿಬ್ಬರ ನಡುವಿನ ಕೊನೆಯ ಪಂದ್ಯವಾಗಿದ್ದು, 2023ರ ಏಷ್ಯ ಕಪ್ ಸೇರಿದಂತೆ 2018ರಿಂದಲೂ ಭಾರತ ಪಾಕಿಸ್ತಾನ ವಿರುದ್ಧ ಆರು ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಆತ್ಮವಿಶ್ವಾಸ ಉಳಿಸಿಕೊಂಡಿದೆ. ನಾಳೆ ಭಾರತೀಯ ಕಾಲಮಾನ ಮಧ್ಯಾಹ್ನ 2:30ರಿಂದ ಪಂದ್ಯ ಆರಂಭವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post