ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಜಿಲ್ಲೆಯ ಸವದತ್ತಿ ತಾಲೂಕಿನ ಬಸಡೋಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಐರನ್ ಮತ್ತು ಫೋಲಿಕ್ ಆಸಿಡ್ ಮಾತ್ರೆ ಸೇವಿಸಿ 21 ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ.
ಮಾತ್ರೆ ಸೇವಿಸಿದ 15 ವಿದ್ಯಾರ್ಥಿನಿಯರು, 6 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಹೊಟ್ಟೆನೋವು, ತಲೆನೋವು ಎಂದು ಬಳಲುತ್ತಿರುವ 21 ಮಂದಿಗೆ ಸವದತ್ತಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಊಟದ ಬಳಿಕ ಸೇವಿಸಬೇಕಿದ್ದ ಮಾತ್ರೆಯನ್ನು ಊಟಕ್ಕೂ ಮೊದಲೇ ಸೇವಿಸಿದ್ದರಿಂದ ಅವಘಢ ಸಂಭವಿಸಿದೆ ಎನ್ನಲಾಗಿದೆ.
Also read: ವಿಚಾರಣೆ ವೇಳೆ ಉಗ್ರ ಅಖ್ತರ್ ಹುಸೇನ್ ನೀಡಿರುವ ಆಘಾತಕಾರಿ ಹೇಳಿಕೆಯೇನು? ಇಲ್ಲಿದೆ ನೋಡಿ
ಘಟನಾ ಸ್ಥಳಕ್ಕೆ ಟಿಎಚ್ಒ ಡಾ. ಮಹೇಶ್ ಚಿತ್ತರಗಿ, ಬಿಇಒ ಶ್ರೀಶೈಲ್ ಕರಿಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post