ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ತನ್ನ ಚಿಕ್ಕಪ್ಪ ಚಲಾಯಿಸುತ್ತಿದ್ದ ಟ್ರಾಕ್ಟರ್’ಗೆ ಸಿಲುಕಿ ಏಳು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಜಿಲ್ಲೆಯ ಅಥಣಿಯ ತೇವರಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಟ್ರಾಕ್ಟರ್’ನಲ್ಲಿ ಶಾಲೆಗೆ ಡ್ರಾಪ್ ಕೊಡಲು ಹೋದಾಗ ದುರಂತ ಸಂಭವಿಸಿದೆ.
ಶಾಲೆ ಬಳಿ ಬಾಲಕ ಟ್ರಾಕ್ಟರ್ ಇಳಿದು ಹೋಗುವಾಗ ಆಕಸ್ಮಿಕವಾಗಿ ಟ್ರೇಲರ್ ತಗುಲಿ ಕೆಳಕ್ಕೆ ಬಿದ್ದಿದ್ದು, ಚಕ್ರಕ್ಕೆ ಸಿಲುಕಿದ್ದಾನೆ. ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಬಾಲಕ ಅಸುನೀಗಿದ್ದಾನೆ.
Also read: ಬ್ರಾಹ್ಮಣರು ಮುಖ್ಯಮಂತ್ರಿ ಆಗಬಾರದು ಎಂದು ಎಲ್ಲಿದೆ? ಪೇಜಾವರ ಶ್ರೀ ಪ್ರಶ್ನೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















