ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಬ್ರಾಹ್ಮಣ ಸಮಾಜವನ್ನು ನಿಂದಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಅವರ ಕ್ರಮವನ್ನು ವಿರೋಧಿಸಿ ಬ್ರಾಹ್ಮಣ ಸಮುದಾಯವರು ಇಂದಿಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಗರದ ಆರ್‌ಪಿಡಿ ಕ್ರಾಸ್ ಬಳಿ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಪ್ರತಿಕೃತಿಯನ್ನು ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು.
ಸಿದ್ಧರಾಮಯ್ಯ ಅವರಿಗೆ `ಸಿದ್ಧರಾಮುಲ್ಲಾ ಖಾನ್’ ಮತ್ತು ಕುಮಾರಸ್ವಾಮಿ ಅವರಿಗೆ `ಸುಮಾರಸ್ವಾಮಿ’ ಎಂಬ ಭಿತ್ತಿ ಪತ್ರ ಹಿಡಿದುಕೊಂಡು ಪ್ರತಿಭಟಿಸಿದರು. ಅಷ್ಟೇ ಅಲ್ಲ ಅವರ ಪ್ರತಿಕೃತಿಯನ್ನು ದಹಿಸಿದರು.
ರಾಜಕೀಯವಾಗಿ ಎದುರಿಸಿ…
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಬೇಕಿದ್ದರೆ ರಾಜಕೀಯವಾಗಿ ಎದುರಿಸಲಿ. ಅದನ್ನು ಬಿಟ್ಟು ಅವರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಉದ್ದೇಶದಿಂದ ಇಡೀ ಬ್ರಾಹ್ಮಣ ಸಮುದಾಯವನ್ನು ನಿಂದಿಸುವುದು ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ. ಆದ್ದರಿಂದ ತಕ್ಷಣ ಅವರು ಕ್ಷಮೆ ಯಾಚಿಸಲಿ.
ವಾಣಿ ಜೋಶಿ, ನಗರಸೇವಕಿ, ಬೆಳಗಾವಿ ಮಹಾನಗರ ಪಾಲಿಕೆ
ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರನ್ನು ಯಾರೂ ಟೀಕೆ ಮಾಡಲಿಲ್ಲ. ಆದರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದನ್ನು ಕೇಳುತ್ತಲೇ ಇಡೀ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವುದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ಪ್ರಶ್ನೆ ಮಾಡಿದರು.
Also read: ಗರ್ಭಿಣಿ ವಿಚಾರದಲ್ಲಿ ವೈದ್ಯಕೀಯ ನಿರ್ಲಕ್ಷ: ಪ್ರಸೂತಿ ತಜ್ಞೆಗೆ ಬಿತ್ತು ಬರೋಬ್ಬರಿ 11 ಲಕ್ಷ ರೂ. ದಂಡ
ಪ್ರಲ್ಹಾದ ಜೋಶಿ ಅವರನ್ನು ಬೇಕಿದ್ದರೆ ರಾಜಕೀಯವಾಗಿ ಟೀಕೆ ಮಾಡಿ. ಆದರೆ ಅವರು ಬ್ರಾಹ್ಮಣ ಸಮುದಾಯದವರು ಎಂದು ತಿಳಿದು ಅವಹೇಳನ ಮಾಡುವುದನ್ನು ಸಮಾಜ ಸಹಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಒಂದು ಸಮುದಾಯವನ್ನು ಓಲೈಕೆ ಮಾಡುವ ಉದ್ದೇಶದಿಂದ ಬ್ರಾಹ್ಮಣರನ್ನು ಗುರಿಯಾಗಿಟ್ಟುಕೊಂಡು ನಿಂದಿಸುತ್ತಿರುವುದನ್ನು ಸಹಿಸಲ್ಲ. ಆದ್ದರಿಂದ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ತಕ್ಷಣ ಬಹಿರಂಗ ಕ್ಷಮಾಪಣೆ ಕೇಳಬೇಕು ಎಂದು ಅವರು ಪ್ರತಿಭಟನಕಾರರು ಆಗ್ರಹಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ವಿಲಾಸ ಜೋಶಿನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಆರ್,ಎಸ್, ಮುತಾಲಿಕ ದೇಸಾಯಿ, ನಗರಸೇವಕಿ ವಾಣಿ ಜೋಶಿ, ಉದ್ಯಮಿ ಮಧ್ವಾಚಾರ್ಯ, ಪ್ರಿಯಾ ಪುರಾಣಿಕ, ಅನಿಲ ಕುಲಕರ್ಣಿ, ಪ್ರಜ್ವಲ ಕುಲಕರ್ಣಿ, ಅಕ್ಷಯ ಕುಲಕರ್ಣಿ, ಮಾಜಿ ನಗರ ಸೇವಕಿ ಅನುಶ್ರೀ ದೇಶಪಾಂಡೆ, ಗೊವಿಂದ ಫಡಕೆ, ಅರವಿಂದ ಹುನಗುಂದ, ಅರ್ಚನಾ ತೇಲಂಗ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post