ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಆನೆಗಳಿಂದ ಕಾಡಿನಂಚಿನ ಜನರಿಗೆ ತೊಂದರೆ ಆಗುತ್ತಿದ್ದು, ಆನೆಗಳನ್ನು #Elephant ಕೊಲ್ಲಲು ಅನುಮತಿ ನೀಡಿ ಎಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ #MLA HarishPoonja ಅವರಿಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡುವುದು ದುರದೃಷ್ಟಕರ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ #Minister Eshwar Khandre ತಿಳಿಸಿದ್ದಾರೆ.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಅವರು, ರಾಜ್ಯ ಸರ್ಕಾರ ಆನೆಗಳ ಹಾವಳಿ ತಡೆಗೆ ಕಳೆದ 2 ವರ್ಷಗಳಲ್ಲಿ 489.46 ಮೀ. ಸೌರಬೇಲಿ, 284.82 ಆನೆ ತಡೆ ಕಂದಕ ನಿರ್ಮಾಣ ಮತ್ತು ನಿರ್ವಹಣೆ ಮಾಡಲಾಗುತ್ತಿದೆ, ಜೊತೆಗೆ ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ರಾಮನಗರ, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8 ಆನೆ ಕಾರ್ಯಪಡೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
Also read: ಬೆಂಗಳೂರು | ಡಿ.16ರಿಂದ 28ನೇ ವರ್ಷದ ಧನುರ್ಮಾಸ ಸಂಗೀತೋತ್ಸವ
ರೇಡಿಯೋ ಕಾಲರ್ #Radio Caller ಅಳವಡಿಸಿ ಆನೆಗಳ ಚಲನವಲನ ಗಮನಿಸಲಾಗುತ್ತಿದೆ. ಕಾಡಿನಂಚಿನ ಜನರಿಗೆ ಈ ಬಗ್ಗೆ ನಿತ್ಯ ಸಂದೇಶಗಳ ಮೂಲಕ, ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಕೃತಕಬುದ್ಧಿಮತ್ತೆ ಆಧಾರಿತ ಕ್ಯಾಮರಾ #Artificial Intelligent Camera ಅಳವಡಿಸಿ ವನ್ಯಜೀವಿಗಳ ಸಂಚಾರದ ಮೇಲೆ ನಿಗಾ ಇಡಲಾಗಿದೆ ಎಂದೂ ತಿಳಿಸಿದರು.
ವನ್ಯಜೀವಿ ದಾಳಿಯಿಂದ ಪ್ರಾಣಹಾನಿ ಆದಾಗ ಕುಟುಂಬದ ಸದಸ್ಯರಿಗೆ 15 ಲಕ್ಷ ರೂ., ಶಾಶ್ವತ ಅಂಗವಿಕಲತೆ ಉಂಟಾದರೆ 10 ಲಕ್ಷ ರೂ., ಭಾಗಶಃ –(ಶಾಶ್ವತವಾದ) ಅಂಗವಿಕಲತೆ ಉಂಟಾದರೆ 5 ಲಕ್ಷ ರೂ. ಗಾಯಗೊಂಡ ವ್ಯಕ್ತಿಗೆ 60 ಸಾವಿರ ರೂ. ಕಾಡಾನೆ ದಾಳಿಯಿಂದ ಆಸ್ತಿಪಾಸ್ತಿಗೆ ಹಾನಿ ಉಂಟಾದರೆ ಪ್ರತಿ ಪ್ರಕರಣಕ್ಕೆ 20 ಸಾವಿರ ರೂ. ದಯಾತ್ಮಕ ಪರಿಹಾರ ನೀಡಲಾಗುತ್ತಿದೆ. ಇದರ ಜೊತೆಗೆ ಮೃತರ ಕುಟುಂಬಕ್ಕೆ ಮತ್ತು ಶಾಶ್ವತ ಅಂಗವಿಕಲರಾದವರಿಗೆ ಮಾಸಿಕ 4 ಸಾವಿರ ರೂ. ಮಾಸಾಶನವನ್ನು 5 ವರ್ಷಗಳ ಕಾಲ ನೀಡಲಾಗುತ್ತಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.
ಮನುಷ್ಯರಿಗೆ ಬದುಕುವ ಹಕ್ಕಿರುವಂತೆಯೇ ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post