ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ನಮ್ಮ ನಾಯಕ ರಾಹುಲ್ ಗಾಂಧಿ #Rahul Gandhi ಅವರು ಡ್ರಗ್ ಅಡಿಕ್ಟ್ #Drug Adict ಎಂದು ಹಲವು ಬಾರಿ ಹೇಳಿದರು. ಇದಕ್ಕೆ ಪ್ರತಿಯಾಗಿ ಯಾಕೆ ಹಾಗೆನ್ನುತ್ತೀರಾ. ಹಾಗಾದರೆ ನೀವೂ ಅಪಘಾತ ಮಾಡಿದ್ದು, ನೀವೂ ಕೊಲೆಗಾರರೇ ಎಂದೆ. ಅದಕ್ಕೆ ನನ್ನ ವಿರುದ್ದ ರವಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ #Minister Lakshmi Hebbalkar ಹೇಳಿದರು.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಅವಮಾನವಾಗುವ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಶಾ #Amith Shah ಅವರು ಮಾತನಾಡಿದ್ದರು. ಅದನ್ನು ನಾವು ನಿನ್ನೆ ಖಂಡಿಸಿ ಪ್ರತಿಭಟನೆ ನಡೆಸಿದೆವು. ಏಕೆಂದರೆ ಅಂಬೇಡ್ಕರ್ ಅವರಿಂದಲೇ ನಾವು ಎಂಎಲ್‌ಎ, ಮಂತ್ರಿ ಆಗಲಿಕ್ಕೆ ಸಾಧ್ಯವಾಗಿದೆ. ಮಹಿಳೆಯರು ಇಂದು ಈ ಸ್ಥಾನಗಳಲ್ಲಿ ಕುಳಿತುಕೊಳ್ಳಲು ಅಂಬೇಡ್ಕರ್ ಅವರೇ ಕಾರಣ ಎಂದರು.
ಧರಣಿ ಮುಗಿಸಿ ಆಸನದಲ್ಲಿ ಕುಳಿತಿದ್ದೆವು. ಆಗ ಸಿಟಿ ರವಿ ಅವರು ಇದ್ದಕ್ಕಿದ್ದಂತೆ ಬಂದು ರಾಹುಲ್ ಗಾಂಧಿಗೆ ಡ್ರಗ್ ಅಡಿಕ್ಟ್ ಎಂದರು. ಆಗ ನನಗೆ ಕೋಪ ಬಂದು, ತಾವು ಕೂಡ ಆಕ್ಸಿಡೆಂಟ್ ಮಾಡಿದ್ದೀರಿ ನೀವು ಕೊಲೆಗಾರರಾಗ್ತೀರಿ ಅಂದೆ. ಆಗ ಅವರು ನನಗೆ ಹೇಳಬಾರದ ಪದವನ್ನು ಒಂದು ಬಾರಿ ಅಲ್ಲ ಎರಡು ಬಾರಿ ಅಲ್ಲ ಪದೇ ಪದೇ ಮೂರ್ನಾಲ್ಕು ಬಾರಿ ಹೇಳಿದರು. ಆ ಪದಗಳನ್ನು ನನಗೆ ಬಳಸಲೂ ಸಹ ಅಸಹ್ಯವಾಗುತ್ತದೆ ಎಂದು ಕಣ್ಣೀರು ಹಾಕಿದರು.
Also read: ಸಿ.ಟಿ. ರವಿ ಬಂಧನ ಖಂಡಿಸಿ ಚಿಕ್ಕಮಗಳೂರು ಬಂದ್ | ಬಿಜೆಪಿ ಪ್ರತಿಭಟನೆ | ಲಘು ಲಾಠಿ ಪ್ರಹಾರ
ಇಂತಹವುಕ್ಕೆಲ್ಲಾ ನಾನು ಹೆದರುವವಳಲ್ಲ. ನಾನೊಬ್ಬ ಮಹಿಳೆ, ತಾಯಿ, ಸಹೋದರಿ ಹಾಗೂ ಅತ್ತೆ. ಈ ರೀತಿ ನನಗೆ ಅಪಮಾನವಾಗಿದೆ. ಇಲ್ಲಿಯವರೆಗೂ ನಾನು ಒಂದು ಇರುವೆಗೂ ಕಾಟ ಕೊಟ್ಟವಳಲ್ಲ, ಕೆಟ್ಟವರನ್ನು ಕಂಡರೆ ದೂರ ಇರುವವಳು. ಆ ವೇದಿಕೆಯಲ್ಲಿ ಎಲ್ಲರೂ ಧೃತರಾಷ್ಟçರಾದರು. ನಮ್ಮ ಪಕ್ಷದವರು ಮಾತ್ರ ನನ್ನ ಬೆನ್ನಿಗೆ ನಿಂತರು ಎಂದರು.
ವಿಧಾನ ಪರಿಷತ್ ಬುದ್ಧಿವಂತರು, ಪ್ರಜ್ಞಾವಂತರು ಇರುವ ಸದನ ಎಂಬ ಹೆಸರಿದೆ. ಅಂತಹ ಸ್ಥಳದಲ್ಲಿ ನನಗೆ ಹೆಣ್ಣಿಗೆ ಅವಮಾನ ಮಾಡಲಾಗಿದೆ, ಅದನ್ನು ನೋಡಿಯೂ ಬಹುತೇಕರು ಸುಮ್ಮನಿದ್ದರು ಎಂದು ಅಸಮಾಧಾನ ಹೊರಹಾಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post