ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಒಂದು ಸರ್ವಾಧಿಕಾರಿ ಸರ್ಕಾರದಿಂದ ಮಾತ್ರ ಇಂತಹ ಘೋರ ವರ್ತನೆ ಸಾಧ್ಯವಿದ್ದು, ಎಲ್ಲ ಲೆಕ್ಕವೂ ಚುಕ್ತಾ ಆಗುತ್ತದೆ ಎಂದು ಶಾಸಕ ಸಿ.ಟಿ. ರವಿ #C T Ravi ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ಮುನ್ನ ಮಾತನಾಡಿರುವ ಅವರು, ಸರ್ವಾಧಿಕಾರಿ ಸರ್ಕಾರದಿಂದ ಮಾತ್ರ ಈ ರೀತಿ ನಡೆಯಲು ಸಾಧ್ಯ. ಜನಪ್ರತಿನಿಧೀಯನ್ನು ನಡೆಸಿಕೊಳ್ಳುವ ರೀತಿಯಲ್ಲಿ ನನ್ನನ್ನು ನಡೆಸಿಕೊಂಡಿಲ್ಲ ಎಂದು ಕಿಡಿ ಕಾರಿದ್ದಾರೆ.
ರಾತ್ರಿಯಿಡೀ ನನ್ನನ್ನು ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಿಗೆ ಸುತ್ತಾಡಿಸಿದ್ದಾರೆ. ಯಾವ ಕಾರಣಕ್ಕೆ ಬಂಧಿಸಿದ್ದಾರೆ ಎಂದು ಹೇಳಿಲ್ಲ. ಎಫ್’ಐಆರ್ ಪ್ರತಿ ಸಹ ನನಗೆ ನೀಡಿಲ್ಲ. ರಾತ್ರಿಯಿಡೀ ನನಗೆ ಊಟ ನೀಡಿಲ್ಲ, ನನ್ನ ತಲೆಗೆ ಆದ ಗಾಯಕ್ಕೆ ತಡವಾಗಿ ಚಿಕಿತ್ಸೆ ಕೊಡಿಸಿದ್ದಾರೆ ಎಂದರು.

ಮಹಿಳೆಯರಿಗೆ ಅಪಮಾನವಾಗುವಂತಹ ಬಳಸಿದ್ದಕ್ಕಾಗಿ ಅವರ ಎಫ್’ಐಆರ್ ಕೂಡ ಆಗಿದೆ. ಪೊಲೀಸರು ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿದ್ದಾರೆ ಎಂದು ವರದಿಯಾಗಿದೆ.
ಈ ವೇಳೆ ಸಿ.ಟಿ. ರವಿ ಅವರ ಮೇಲೆ ಹಲ್ಲೆಯೂ ನಡೆದಿದ್ದು, ತಲೆಗೆ ಗಾಯವಾಗಿದೆ. ಹಣೆಯಿಂದ ರಕ್ತ ಸೋರುತ್ತಿರುವ ದೃಶ್ಯಗಳು ಕಂಡುಬಂದಿವೆ. ಅಲ್ಲದೇ ಹಣೆಯಲ್ಲಿ ರಕ್ತ ಸೋರುತ್ತಿದ್ದರೂ ಪೊಲೀಸರು ಹೊತ್ತು ಅವರನ್ನು ಜೀಪ್’ನಲ್ಲಿ ಕೂರಿಸಿರುವ ದೃಶ್ಯಗಳು ಕಾಲತಾಣಗಳಲ್ಲೂ ವೈರಲ್ ಆಗಿವೆ.
Also read: ರವಿಗೆ ಕೊಲೆಗಾರ ಎಂದಿದ್ದು ನಿಜ, ಆದರೆ…| ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣೀರಿಟ್ಟು ಹೇಳಿದ್ದೇನು?
ಇನ್ನೂ ಸಿ.ಟಿ. ರವಿ ಅವರನ್ನ ಬೆಂಗಳೂರಿಗೆ ಕರೆತರುವ ವೇಳೆ ಖಾನಾಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ ನಡೆದಿದೆ. ಹಣೆಗೆ ಪೆಟ್ಟಾಗಿ ರಕ್ತ ಸೋರುತ್ತಿದ್ದರೂ, ಪೊಲೀಸರು ಅವರನ್ನು ಹೊತ್ತು ವಾಹನದಲ್ಲಿ ಹಾಕಿದ್ದಾರೆ. ಈ ವೇಳೆ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ರವಿ ಚೀರಾಡಿದ್ದಾರೆ.
ರವಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಬಂಧನವನ್ನು ತೋರಿಸಿದ್ದಾರೆ. ರವಿ ಪರವಾಗಿ ವಾದ ಮಂಡಿಸಿರುವ ವಕೀಲ ಜಿರಲಿ, ಓರ್ವ ಜನಪ್ರತಿನಿಧಿಯನ್ನು ಸ್ಪೀಕರ್ ರೂಲಿಂಗ್ ನೀಡುವ ಮುನ್ನವೇ ಅಮಾನುಷವಾಗಿ ಬಂಧಿಸಿರುವುದು ಅಕ್ರಮವಾಗಿದೆ. ಕಾನೂನಿಗೆ ವಿರುದ್ಧವಾಗಿ ರವಿ ಅವರನ್ನು ಬಂಧಿಸಲಾಗಿದೆ ಎಂದು ವಾದಿಸಿದ್ದಾರೆ.

ರವಿ ವಿರುದ್ದ ಎಫ್’ಐಆರ್ ಹಾಗೂ ಬಂಧಿಸಿರುವುದೇ ಕಾನೂನುಬಾಹಿರವಾಗಿದ್ದು ಅವರು ಮಾನಸಿಕ, ದೈಹಿಕವಾಗಿ ಕುಗ್ಗಿದ್ದಾರೆ. ಹೀಗಾಗಿ, ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲದೇ, ಹೆಬ್ಬಾಳ್ಕರ್ ಹಾಗೂ ಡಿ.ಕೆ. ಶಿವಕುಮಾರ್ ಅವರು ನೀನು ಚಿಕ್ಕಮಗಳೂರಿಗೆ ಹೋಗುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಿ.ಟಿ. ರವಿ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ ಎಂದು ವರದಿಯಾಗಿದೆ.
ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಸಿ.ಟಿ. ರವಿ ಅವರ ಜಾಮೀನು ಆದೇಶವನ್ನು ಮಧ್ಯಾಹ್ನ 3 ಗಂಟೆಗೆ ಕಾಯ್ದಿರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post