ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಸಾಲ ಮರುಪಾವತಿಸಿಲ್ಲ ಎನ್ನುವ ಕಾರಣಕ್ಕೆ ಬಾಣಂತಿ ಸೇರಿದಂತೆ ಕುಟುಂಬದವರನ್ನೆಲ್ಲ ಹೊರ ಹಾಕಿ ಬೀಗ ಹಾಕಲಾಗಿದ್ದ ಪ್ರಕರಣಕ್ಕೆ ತ್ವರಿತವಾಗಿ ಸ್ಪಂದಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, #Minister Lakshmi Hebbalkar ತಮ್ಮ ಮನೆಯ ಬೀಗ ತೆರವುಗೊಳಿಸಿ ಕುಟುಂಬದವರನ್ನು ಮನೆಗೆ ಸೇರಿಸಿದ್ದಾರೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಮಾಧುರಿ ಲೋಹಾರ್ ಎನ್ನುವ ಬಾಣಂತಿ ಮತ್ತು ಅವರ ಕುಟುಂಬದವರು ಸಾಲ ತೀರಿಸಿಲ್ಲ ಎಂದು ಆರೋಪಿಸಿ ಖಾಸಗಿ ಹಣಕಾಸು ಸಂಸ್ಥೆಯವರು ಹಸಿ ಬಾಣಂತಿ ಸೇರಿದಂತೆ ಕುಟುಂಬಸ್ಥರನ್ನು ಮನೆಯಿಂದ ಹೊರಹಾಕಿ ಸೀಜ್ ಮಾಡಿದ್ದರು.

Also read: ಹೊಸಪೇಟೆ | ಚಿಂತಾಮಣಿ ಮಠಕ್ಕೆ ಶೃಂಗೇರಿ ವಿಧುಶೇಖರ ಶ್ರೀಗಳ ಭೇಟಿ
ನಂತರ ಹಣಕಾಸು ಸಂಸ್ಥೆಯ ಪ್ರತಿನಿಧಿಗಳ ಜೊತೆ ಮಾತನಾಡಿ, ಸಾಲ ಮರುಪಾವತಿಸಲು ಸಮಯಾವಕಾಶ ಕೊಡಿಸಿದ್ದಲ್ಲದೆ, ಮನೆಯ ಬೀಗ ತೆರವು ಮಾಡಿಸಿ ಕುಟುಂಬಸ್ಥರನ್ನು ಮನೆಯೊಳಗೆ ಸೇರಿಸಿದರು. ಕುಟುಂಬಸ್ಥರು ಕೇವಲ ಸಾಲದ ಅಸಲನ್ನಷ್ಟೆ ತುಂಬಲಿದ್ದು, ಅದಕ್ಕೂ ಕಾಲಾವಕಾಶ ನೀಡಬೇಕು ಎನ್ನುವ ತಾಕೀತನ್ನು ಸಚಿವರು ಮಾಡಿದ್ದಾರೆ.

ಗ್ರಾಮಪಂಚಾಯಿತಿ ಅಧ್ಯಕ್ಷ ನಾಮದೇವ ಜೋಗಣ್ಣವರ್, ಲಕ್ಷ್ಮೀ ಹೆಬ್ಬಾಳಕರ್ ಅವರ ಮುಖಂಡರಾದ ಲಕ್ಷ್ಮಣ ಮುಚ್ಚಂಡಿ, ರಮೇಶ ಜಳಕಣ್ಣವರ್, ಸ್ವಪ್ನಿಲ್ ಜಾಧವ, ಕೃಷ್ಣಾ ಪಾಟೀಲ, ಸಚಿವರ ಆಪ್ತ ಸಹಾಯಕ ಮಹಂತೇಶ ಹಿರೇಮಠ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post