ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದಲ್ಲಿ ಸಮಸ್ಯೆ ತಲೆದೋರಬಹುದು ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ 3-4ದಿನ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಡಿಸಿ ನಿತೇಶ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾನಾಡಿದ ಅವರು, ಸದ್ಯ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ತಹಶೀಲ್ದಾರ್ ಅಕೌಂಟ್ನಲ್ಲಿ ಹಣ ಇದ್ದು ತುರ್ತು ಪರಿಹಾರಕ್ಕೂ ಯಾವುದೇ ಸಮಸ್ಯೆ ಇಲ್ಲ. ಜಿಲ್ಲೆಗೆ 69 ಸಾವಿರ ಕ್ಯೂಸೆಕ್ನಷ್ಟು ನೀರು ಹರಿದು ಬರುತ್ತಿದೆ. ಅದೇ ರೀತಿ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ. ಮಹಾರಾಷ್ಟ್ರದ ಕೋಯ್ನಾ ಜಲಾಶಯದಲ್ಲಿ ಕೇವಲ ಶೇ. 22ರಷ್ಟು ನೀರು ಸಂಗ್ರಹವಾಗಿದೆ. ಕೋಯ್ನಾ ಅಥವಾ ಮಹಾರಾಷ್ಟ್ರದ ಯಾವುದೇ ಡ್ಯಾಂನಿಂದ ನೀರು ಬಿಡುತ್ತಿಲ್ಲ ಎಂದು ತಿಳಿಸಿದರು.
ಮಳೆ ಎಷ್ಟು ಆಗಿದೆಯೋ ಆ ನೀರು ಮಾತ್ರ ಬರುತ್ತಿದೆ. ಹಿಡಕಲ್ ಜಲಾಶಯದಲ್ಲಿ ಕೇವಲ ಶೇ. 17.5ರಷ್ಟು ನೀರು ಸಂಗ್ರಹವಾಗಿದೆ. ನವಿಲುತೀರ್ಥ ಜಲಾಶಯದಲ್ಲಿ ಶೇ. 34ರಷ್ಟು ನೀರು ಸಂಗ್ರಹವಾಗಿದೆ. ಎಷ್ಟೇ ನೀರು ಒಳಹರಿವು ಬಂದರೂ ಡ್ಯಾಂಗಳಲ್ಲಿ ಸಂಗ್ರಹ ಸಾಮರ್ಥ್ಯ ಇದೆ. ಮಾರ್ಕಂಡೇಯ ಜಲಾಶಯದಲ್ಲೂ ಶೇ. 36ರಷ್ಟು ನೀರು ಸಂಗ್ರಹವಿದೆ ಎಂದರು.
Also read: ಮುಂದುವರಿದ ವ್ಯಾಪಕ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post