ಕಲ್ಪ ಮೀಡಿಯಾ ಹೌಸ್ | ಅಥಣಿ |
ಅಥಣಿ ಪಟ್ಟಣದಲ್ಲಿ ಮಾಜಿ ಉಪ ಮುಖ್ಯ ಮಂತ್ರಿಗಳ ಪುತ್ರನ ಮಾಲಿಕತ್ವದ ಪೆಟ್ರೊಲಿಯಂ ಪಂಪದಲ್ಲಿ ಕಳ್ಳತನ ಮಾಡುತಿದ್ದ ಚಾಲಕ ಸಿಕ್ಕಿ ಬಿದ್ದಿರುವ ಘಟನೆ ಜರುಗಿದೆ.
ಅಥಣಿ ಸತ್ತಿ ರೋಡನಲ್ಲಿರುವ ಚಿದಾನಂದ ಸವದಿ ಮಾಲಿಕತ್ವದ ಪಂಪ್ ಗೆ ಭಾರತ ಪೆಟ್ರೋಲಿಯಂ ನಿಂದ ಬಂದ ಪೆಟ್ರೋಲನ್ನು ಇಳಿಸುವ ವೇಳೆ ಚಾಲಕ ತನ್ನ ಹಿಂದಿನ ಸಿಟಿನಲ್ಲಿ 35 ಲೀಟರಿನ 3 ಪ್ಲಾಸ್ಟಿಕ್ ಕ್ಯಾನ್ ಗಳನ್ನು ಇಟ್ಟು ಕೊಂಡು ಟ್ಯಾಂಕರಿಗೆ ಹೋಲ್ ಮಾಡಿ ಪೈಪ್ ಮೂಲಕ ತುಂಬಿಸಿಕೊಳ್ಳುತಿದ್ದ ಎನ್ನಲಾಗಿದೆ.
ಅವನ ಚಲನ ವಲನವನ್ನು ಸೂಕ್ಷ್ಮವಾಗಿ ಗಮನಿಸಿದ ಪಂಪಿನ ಸಿಬ್ಬಂದಿ ಪರಿಶೀಲಿಸಲಾಗಿ ಸಿಕ್ಕಿ ಬಿದ್ದಿದ್ದಾನೆ. ತಪ್ಪು ಒಪ್ಪಿಕೊಂಡ ಚಾಲಕ ಹಲವು ದಿನಗಳಿಂದ ಕಳ್ಳತನ ಮಾಡುತ್ತಿರುವದಾಗಿ ಹೇಳಿಕೆ ನೀಡಿದ್ದಾನೆ. ಅಥಣಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post