ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ #Mahathma Gandhi ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಬೆಳಗಾವಿಯ 100 ಕಡೆ ತಲಾ 100 ಶ್ರೀಗಂಧದ ಸಸಿ #100 Sandalwood Plant Sapling ನೆಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳೊಂದಿಗೆ ಸುವರ್ಣಸೌಧದ 318ನೇ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಕೂಡ ಈ ಶತಮಾನೋತ್ಸವವನ್ನು ಸ್ಮರಣೀಯಗೊಳಿಸಲು ಬೆಳಗಾವಿ ಜಿಲ್ಲೆಯ ಆಯ್ದ 100 ಸ್ಥಳಗಳಲ್ಲಿ ತಲಾ 100 ಅಂದರೆ 10 ಸಾವಿರ ಶ್ರೀಗಂಧದ ಸಸಿಗಳನ್ನು ನೆಟ್ಟು ಪೋಷಿಸಲು ತೀರ್ಮಾನಿಸಿದೆ. ಇದರ ಜೊತೆಗೆ ರಾಜ್ಯದಲ್ಲಿ ನಡೆಯಲಿರುವ ವನಮಹೋತ್ಸವದ ವೇಳೆ ನೆಡಲು ಉದ್ದೇಶಿಸಿರುವ 2 ಕೋಟಿ ಸಸಿಗಳ ಜೊತೆಗೆ ಹೆಚ್ಚುವರಿಯಾಗಿ ಶತಮಾನೋತ್ಸವದ ಸ್ಮರಣಾರ್ಥ 10 ಲಕ್ಷ ಸಸಿಗಳನ್ನು ನಡೆಲಾಗುವುದು ಎಂದರು.
Also read: ಇದು ತುಂಬಾ ದಿನ ನಡೆಯಲ್ಲ, ಎಲ್ಲವೂ ಲೆಕ್ಕ ಚುಕ್ತಾ ಆಗುತ್ತೆ | ಸರ್ಕಾರದ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

ಶ್ರೀಗಂಧದ ಸಸಿಗಳನ್ನು ನೆಡುವ ತಾಣಗಳಲ್ಲಿ ಮಹಾತ್ಮಾಗಾಂಧೀಜಿ ಅವರು 1924ರಲ್ಲಿ ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಿದ್ದ ಛಾಯಾಚಿತ್ರಗಳು ಮತ್ತು ಅಧಿವೇಶನದ ಸಂಕ್ಷಿಪ್ತ ವಿವರವನ್ನು ಪ್ರದರ್ಶಿಸಲಾಗುವುದು.ಇದರಿಂದ ಇಂದಿನ ಪೀಳಿಗೆಗೆ ಮತ್ತು ಮುಂದಿನ ಪೀಳಿಗೆಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ತಿಳಿಯುತ್ತದೆ. ಜೊತೆಗೆ ಶ್ರೀಗಂಧದ ಬೀಡು, ಗಂಧದಗುಡಿ ಎಂಬ ಖ್ಯಾತಿ ಚಾಮರಾಜನಗರದಿಂದ ಬೆಳಗಾವಿಯವರೆಗೆ ಚಿರಸ್ಥಾಯಿಯಾಗುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post