ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಈ ನಾಡಿನ ಮಹಾಪುರುಷರುಗಳು ಅವರ ತ್ಯಾಗ ಈ ನಾಡಿಗೆ ಸಮರ್ಪಿಸಿದ್ದಾರೆ. ಇಂತಹ ಮಹಾಪುರುಷರ ಮೂರ್ತಿಗಳಿಗೆ ತೊಂದರೆ ಮಾಡಿರುವ ಆ ಪುಂಡ ಪೊಕರಿಗಳಿಗೆ ತಕ್ಕ ಶಾಸ್ತಿ ನಮ್ಮ ಸರ್ಕಾರ ಮಾಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.

ಬೆಳಗಾವಿಯ ಅನಗೊಳದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿ ಹಾರ ಹಾಕಿ ಗೌರವ ಸಮರ್ಪಣೆ ಮಾಡಿದರು.

ಎಂಇಎಸ್ ನಶಿಸಿ ಹೊಗತಾ ಇದೆ. ಇಂತಹ ಸಂದರ್ಭದಲ್ಲಿ ಇಂತಹ ಹೀನ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವುದು ದುರಾದೃಷ್ಟಕರ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















