ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಸೂಕ್ತ ಸಮಯಕ್ಕೆ ಗರ್ಭಿಣಿಗೆ ಚಿಕಿತ್ಸೆ ನೀಡದ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಸಂಗೊಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯನ್ನು ವರ್ಗಾವಣೆ ಮಾಡಿದ್ದು, ಆಸ್ಪತ್ರೆಯ ಇಬ್ಬರು ವೈದ್ಯರಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಕಡತನಾಳ ಗ್ರಾಮದ ರತ್ನವ್ವ ಕಾದ್ರೊಳ್ಳಿ ಅವರನ್ನು ಗುರುವಾರ ಹೆರಿಗೆಗಾಗಿ ಕರೆ ತರಲಾಗಿತ್ತು. ಆದರೆ ಅಲ್ಲಿ ವೈದ್ಯರು, ನರ್ಸ್ ಸೇರಿದಂತೆ ಯಾರೂ ಇರಲಿಲ್ಲ. ಎರಡು ಗಂಟೆಗಳ ಕಾಲ ಗರ್ಭಿಣಿ ತೀವ್ರ ಹೆರಿಗೆ ನೋವಿನಿಂದ ಪರದಾಡಿದರೂ ಯಾರು ಬರದ ಕಾರಣ ಬೈಲಹೊಂಗಲದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಸುರಕ್ಷಿತ ಹೆರಿಗೆ ಮಾಡಿಸಲಾಯಿತು ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ, ಕರ್ತವ್ಯಕ್ಕೆ ಹಾಜರಿರದ ಡಾ.ಸಂತೋಷ ಗಡದವರ ಮತ್ತು ಡಾ. ಸುಷ್ಮಾ ಬಾಳಮಟ್ಟಿ ಅವರಿಗೆ ನೋಟಿಸ್ ಜಾರಿ ಮಾಡಿದರು. ಗೈರಾದ ನರ್ಸ್ ಬಿ.ಶಾಂತಮ್ಮ ಅವರನ್ನು ತಕ್ಷಣ ವರ್ಗಾವಣೆ ಮಾಡಿದರು.
Also read: ಕಗ್ಗತ್ತಲಲ್ಲಿ ಪುರಾಣ ಪ್ರಸಿದ್ಧ ಕೋಟೆ ದೇವಾಲಯ! ವಿದ್ಯುತ್ ಬಿಲ್ ಪಾವತಿಸಿ ಬೆಳಕು ನೀಡಿ
ಆರೋಗ್ಯ ಕೇಂದ್ರದ ಇಬ್ಬರೂ ವೈದ್ಯರು ಕರ್ತವ್ಯ ಲೋಪವೆಸಗಿದ್ದು ಸಾಬೀತಾಗಿದೆ. ಅವರು ನೋಟಿಸ್‌ಗೆ ನೀಡುವ ಉತ್ತರ ಗಮನಿಸಿ ಅವರ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post