ಕಲ್ಪ ಮೀಡಿಯಾ ಹೌಸ್
ಬೆಳಗಾವಿ: ಸ್ಥಳೀಯವಾಗಿ ಸಾರ್ವಜನಿಕ ಮತ್ತು ಸಾಮಾಜಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಯುವ ಮುಖಂಡ ವಿನೋದ್ ಸವದಿ ಅವರು ಇಂದು ಬೆಳಗಿನ ಜಾವ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.
ವಿನೋದ್ ಅವರು ಉಪಮುಖ್ಯಮಂತಿಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಸಹೋದರ ಪರಪ್ಪ ಸವದಿ ಅವರ ಪುತ್ರರಾಗಿದ್ದಾರೆ. ಪರಪ್ಪ ಸವದಿ ಅವರು ಕೃಷ್ಣ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದಾರೆ.
ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ವಿನೋದ್ ಅವರು ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ಉಚಿತವಾಗಿ ಹಂಚಿಕೆ ಮಾಡುವುದರಲ್ಲಿ ಮತ್ತು ಇತರ ಸಾಮಾಜಿಕ ಕೆಲಸಗಳಲ್ಲಿಯೂ ಅವಿರತವಾಗಿ ಕೆಲಸ ಮಾಡಿದ್ದರು.
ಭವಿಷ್ಯದಲ್ಲಿ ಉತ್ತಮ ನಾಯಕನಾಗುವ ಲಕ್ಷಣಗಳು ಅವರಲ್ಲಿ ಮೈಗೂಡಿದ್ದವು. ಆದರೆ ಕೇವಲ 36 ವರ್ಷಗಳಲ್ಲಿಯೇ ಅವರ ಬದುಕು ಅಂತ್ಯಗೊಂಡಿದ್ದು, ನಿಜಕ್ಕೂ ಬೇಸರದ ಸಂಗತಿ ಎಂದು ವಿನೋದ್ ಅವರ ಆತ್ಮೀಯ ಸ್ನೇಹಿತರ ಬಳಗವು ಕಂಬನಿ ಮಿಡಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post