ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಬಿಜೆಪಿಯಲ್ಲಿ ಕುರುಬರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ವಿಚಾರದಲ್ಲಿ ನಾನು ಸಭಾಪತಿಯಾಗಿ ಕಾಮೆಂಟ್ ಮಾಡುವುದಿಲ್ಲ ಎಂದು ವಿಧಾನ ಪರಿಷತ್ ಹಂಗಾಮಿ ಸಭಾಪತಿ ರಘುನಾಥ್ ಮಲ್ಕಾಪುರೆ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಕುರುಬರಿಗೆ ಅನ್ಯಾಯ ಆಗುತ್ತಿದೆ ಎಂಬ ಆರೋಪ ವಿಚಾರ ಪ್ರಸ್ತಾಪವಾಗಿದೆ. ನಾನು ಬಿಜೆಪಿಯ ಕಾರ್ಯಕರ್ತ, ನಂತರ ಸಭಾಪತಿ. ನಾನು ಸಭಾಪತಿಯಾಗಿರುವಾಗ ಈ ರೀತಿ ಚರ್ಚೆಗೆ ಅವಕಾಶ ಕೊಡುವುದು ಸೂಕ್ತ ಅಲ್ಲ ಎಂದಿದ್ದಾರೆ.
ರಾಜಕಾರಣ ಮುಖಾಂತರ ರಾಷ್ಟçದ ಪುನರ್ನಿರ್ಮಾಣಕ್ಕೋಸ್ಕರ ಬಿಜೆಪಿ ಆಯ್ಕೆ ಮಾಡಿಕೊಂಡಿz್ದೆÃನೆ. ರಾಜಕಾರಣವನ್ನು ರಾಷ್ಟ್ರಕಾರಣ ಎಂದು ಭಾವಿಸಿ ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಸಭಾಪತಿ ಸ್ಥಾನ ಕೊಟ್ಟಿದ್ದು ಸೌಭಾಗ್ಯ. ನಾನು ಬಹಳ ಸಂತೋಷದಿಂದ ಇದ್ದೇನೆ ಎಂದಿದ್ದಾರೆ.
Also read: ಶಿವಮೊಗ್ಗ ಕಾಂಗ್ರೆಸ್ ಕಾರ್ಪೊರೇಟರ್ ಮನೆ ಮೇಲೆ ದಾಳಿ: 40 ಕೆಜಿ ಗೋಮಾಂಸ ಪತ್ತೆ
ನಿರಂತರವಾಗಿ ಎಂಟನೆಯ ಬಾರಿಗೆ ಹೊರಟ್ಟಿ ಅವರು ಸಭಾಪತಿಯಾಗಿ ಪುನರ್ ಆಯ್ಕೆಯಾಗುತ್ತಿರುವುದು ಸಂತೋಷ. ನಾನು ಇವತ್ತು ಹೋಗಿ ಅವರನ್ನು ಸಭಾಪತಿಯಾಗಿ ಆಯ್ಕೆ ಮಾಡುತ್ತೇನೆ. ಸಭಾಪತಿ ಸ್ಥಾನದಲ್ಲಿರುವಾಗ ನಾನು ಯಾವುದಕ್ಕೂ ಕಮೆಂಟ್ ಮಾಡುವುದಿಲ್ಲ. ನನಗೆ ಏನೇ ಜವಾಬ್ದಾರಿ ಕೊಟ್ಟರೂ ಚಾಚು ತಪ್ಪದೇ ಮಾಡುತ್ತೇನೆ ಎಂದಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















