ಬೆಳಗಾವಿ: ಅಥಣಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸಮರ್ಪಕ ನೀರಿನ ವ್ಯವಸ್ಥೆಯಿಲ್ಲದೇ ಪರದಾಟವಾಗಿದ್ದು, ಶೌಚಾಲಯಗಳ ಅಸ್ವಚ್ಛತೆ, ನೀರಿನ ಅಸಮರ್ಪಕ ಪೂರೈಕೆಯಿಂದ ಸಮಸ್ಯೆ ಉಂಟಾಗಿದೆ.
ಈ ಸರಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೂಡ ರೋಗಿಗಳು ಶೌಚಾಲಯ ಬಳಸಲು ಸಮಸ್ಯೆ ಎದುರಾಗಿದೆ.
ಈ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಶಾಸಕ ಮಹೇಶ್ ಕುಮಟಳ್ಳಿ ಜನರ ಪರದಾಟ ಅವರ ಕಿವಿಗೆ ಬೀಳುತ್ತಿಲ್ಲ, ಅವರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Discussion about this post