ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಗ್ರಾಮಾಂತರ ಭಾಗದ ಕಾಕತ್ತಿ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯನ್ನು ಬೆತ್ತಲೆ ಮಾಡಿ, ಮೆರವಣಿಗೆ ಮಾಡಿ, ಕಂಬಕ್ಕೆ ಕಟ್ಟುಹಾಕಿ ಥಳಿಸಿರುವ ಘಟನೆ ದ್ರೌಪತಿ ವಸ್ತ್ರಾಪಹರಣಕ್ಕೂ ಕ್ರೂರವಾದ ಘಟನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #BYVijayendra ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇತ್ತೀಚಿಗೆ ಬೆಳಗಾವಿ #Belagavi ಗ್ರಾಮಾಂತರದ, ಕಾಕತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಓರ್ವ ಮಹಿಳೆಯನ್ನು ಬೆತ್ತಲೆ ಮಾಡಿ, ಮೆರವಣಿಗೆ ಮಾಡಿ, ಕಂಬಕ್ಕೆ ಕಟ್ಟುಹಾಕಿ ಹಿಂಸಿಸಿ ತಳಿಸಿದ ಹೀನ ಕೃತ್ಯವನ್ನುವೆಲ್ಲ ಗಮನಿಸಿದ್ದೇವೆ. ಈ ದೊಡ್ಡ ಘಟನೆಯಿಂದ ನಮ್ಮ ರಾಜ್ಯ ಅಲ್ಲದೆ ಇಡೀ ದೇಶದಾದ್ಯಂತ ಈ ವಿಷಯ ಚರ್ಚೆ ಆಗುತ್ತಿದೆ ಎಂದರು.
ಬೆಳಗಾವಿ ವಿಧಾನಸೌಧದಲ್ಲಿ ಅಧಿವೇಶನ ನಡೆಯುವ ವೇಳೆಯೇ ಇಂತಹ ಘಟನೆ ನಡೆದಿರುವುದು ತಲೆತಗ್ಗಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಅದು ಕೂಡ ಬೆಳಗಾವಿ ಗ್ರಾಮಾಂತರದಲ್ಲಿಯೇ ನಡೆದಿರುವುದು ನಿಜಕ್ಕೂ ಖಂಡನೀಯವಾದುದು ಎಂದು ಕಿಡಿ ಕಾರಿದರು.
ಇಂತಹ ಘಟನೆಗಳು ನಡೆದಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮೇಲ್ನೋಟಕ್ಕೆ ತೋರ್ಪಡಿಸುತ್ತದೆ. ಘಟನೆಯ ಆರೋಪಿಗಳನ್ನು ಬಂದಿಸಿದ್ದೇವೆ ಎಂದು ಸರ್ಕಾರ ಸುಮ್ಮನೆ ಕೂರುವುದನ್ನು ಬಿಟ್ಟು, ಈ ವಿಷಯ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.
ಇಂತಹ ಕ್ರೂರ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಕ್ರಮವಹಿಸಬೇಕು. ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ, ಮೆರವಣಿಗೆ ಪ್ರಕರಣ ದ್ರೌಪದಿ ವಸ್ತ್ರಾಪಹರಣಕ್ಕಿಂತಲೂ ಕ್ರೂರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೂರದ ಮಣಿಪುರ #Manipura ಘಟನೆಗೆ ಕಂಬನಿ ಮಿಡಿದವರು ಅಧಿವೇಶನ ನಡೆಯುತ್ತಿರುವ ನಮ್ಮ ರಾಜ್ಯದ ಬೆಳಗಾವಿಯಲ್ಲಿ ನಡೆದ ಘಟನೆ ಬಗ್ಗೆ ಕಂಬನಿ ಮಿಡಿಯಲೇ ಇಲ್ಲ. ಈ ಘಟನೆ ಬಗ್ಗೆ ರಾಜ್ಯದ ಉಚ್ಚ ನ್ಯಾಯಾಲಯ, ರಾಜ್ಯ ಸರ್ಕಾರಕ್ಕೆ ಸರ್ಕಾರದ ಆಡಳಿತದ ಬಗ್ಗೆ ಚಾಟಿಯನ್ನು ಬೀಸುವ ಕೆಲಸ ಮಾಡಿದೆ. ಈ ಘಟನೆ ಬಗ್ಗೆ ಮಾಹಿತಿ ಕೇಳಿ ನಿಮಗೆ ಈ ಘಟನೆ ಬಗ್ಗೆ ಮಾಹಿತಿ ಇಲ್ಲವೇ, ಪೋಲಿಸ್ ಗಸ್ತು ಯಾಕೆ ಇರಲಿಲ್ಲ, ಇದರಿಂದ ನಿಮ್ಮ ಸರ್ಕಾರದ ಆಡಳಿತ ವ್ಯವಸ್ಥೆ ಭದ್ರತಾ ಲೋಪ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದೆ ಎಂದರು.
ಸರ್ಕಾರ ಇನ್ನಾದರೂ ಸರಿಯಾದ ರೀತಿಯಲ್ಲಿ ಆಡಳಿತವನ್ನು ನಡೆಸಲು ಎಂದು ಹೇಳಿದ ರಾಜ್ಯಾಧ್ಯಕ್ಷರು, ಸರ್ಕಾರ ಇನ್ನಾದರೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಈ ಘಟನೆ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯನ್ನು ನಡೆಸಬೇಕು ಎಂದರು.
ನಾನು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆ ತಾಯಿಗೆ ಸಾಂತ್ವನ ಹೇಳಿ ಬಂದಿದ್ದೇನೆ. ಆದರೆ ರಾಜ್ಯ ಸರ್ಕಾರದ ಗೃಹ ಮಂತ್ರಿ ಒಬ್ಬರು ಬಿಟ್ಟರೆ, ಮುಖ್ಯಮಂತ್ರಿ ಆಗಲಿ ಇನ್ಯಾವುದೇ ನಾಯಕರಾಗಲಿ, ಆಸ್ಪತ್ರೆಗೆ ಭೇಟಿ ನೀಡಿ ಆ ತಾಯಿಗೆ ಸಾಂತ್ವನ ಹೇಳದಿರುವುದು ದೂರದೃಷ್ಟಕರ ಸಂಗತಿಯಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ #Congress ಸರ್ಕಾರ ಬಂದ ಮೇಲೆ, ಪೊಲೀಸರ ಮೇಲೆ ಹೆದರಿಕೆ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದರು ದೂರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















